ಪಟ್ಟಾಧಿಕಾರ ಮಹೋತ್ಸವ ಸೋಮವಾರದಿಂದ

19KSH1
Published on

ಕೋ.ಶಿವಾಪೂರ: ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠದಲ್ಲಿ ಏ.21ರಿಂದ ಮೇ12ರ ವರೆಗೆ ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಚರಂತಯ್ಯ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ. ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ 1008 ಕುಂಭೋತ್ಸವ, ಅಯ್ಯಾಚಾರ ಕಾರ್ಯಕ್ರಮ ಹಾಗೂ ಪುರಾಣ ಪ್ರವಚನ&ಧರ್ಮ ಸಮಾರಂಭ ನಡೆಯಲಿದೆ. ಅಂತೂರ&ಬೆಂತೂರ ಬೂದಿಸ್ವಾಮಿಮಠದ ಕುಮಾರ ದೇವರು ಪ್ರವಚನ ನೀಡುವರು. ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net