

ಬೆಂಗಳೂರು: ಕೊರೊನಾ ಸೋಂಕು ಪತ್ತೆಯಾಗಿರುವ ಟೆಕ್ಕಿಯ ಪತ್ನಿ, ಮಗಳು ಕಲಿಯುತ್ತಿರುವ ಶಾಲೆಗೆ ಪತ್ರ ಬರೆದು ಶಾಲೆಗೆ ರಜೆ ನೀಡುವಂತೆ ಕೋರಿರುವುದು ಬೆಳಕಿಗೆ ಬಂದಿದೆ.
ನನ್ನ ಪತಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಮಗಳು ಶಾಲೆಗೆ ಬಂದರೆ ಕೊರೊನಾ ವೈರಸ್ ಹರಡಬಹುದು. ಹೀಗಾಗಿ ಇಡೀ ಶಾಲೆಗೆ ರಜೆ ಘೋಷಿಸಬೇಕು ಎಂದು ಸೋಂಕು ಪೀಡಿತ ಟೆಕ್ಕಿಯ ಪತ್ನಿ ಶಾಲೆಗೆ ಇಮೇಲ್ ಕಳುಹಿಸಿದ್ದಾರೆ.
ಇಮೇಲ್ ನೋಡಿ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ಘೋಷಿಸಿದೆ. ಅಲ್ಲದೆ ಪಾಲಕರಿಗೆ, ನಮ್ಮ ಶಾಲೆಯ ವಿದ್ಯಾರ್ಥಿಯ ಪಾಲಕರೊಬ್ಬರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ರಜೆ ಘೋಷಿಸಲಾಗಿದೆ ಎಂದು ಶಾಲಾ ಆಡಳತಿ ಮಂಡಳಿ ಮಾಹಿತಿ ನೀಡಿದೆ.
ಶಾಲೆಗೆ ರಜೆ ಘೋಷಿಸಿರುವುದು ಗಮನಕ್ಕೆ ಬರುತ್ತಲೇ ಆರೋಗ್ಯ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ತೆರಳಿ ಮಾಹಿತಿ ಪಡೆದರು. ವಿಷಯವನ್ನು ಮುಚ್ಚಿಟ್ಟ ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಸಿಡಿಮಿಡಿಗೊಂಡಿದ್ದಾರೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)