

ಹಾವೇರಿ: ಪೊಲೀಸ್, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಸೋಮವಾರ 42 ಜನರಿಗೆ ಕರೊನಾ ದೃಢಪಟ್ಟಿದೆ. 32 ಜನರು ಗುಣವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಈವರೆಗೆ 2,525 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 1,660 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 56 ಜನರು ಮೃತಪಟ್ಟಿದ್ದಾರೆ. ಒಟ್ಟು 809 ಸಕ್ರಿಯ ಪ್ರಕರಣಗಳಿದ್ದು, 410 ಸೋಂಕಿತರು ಹೋಂ ಐಸೋಲೇಷನ್ನಲ್ಲಿ, 399 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತಾಲೂಕುವಾರು ಸೋಂಕಿತರ ಸಂಖ್ಯೆ: ಹಾವೇರಿ ತಾಲೂಕಿನ 18, ಹಾನಗಲ್ಲ ಹಾಗೂ ಸವಣೂರ ತಾಲೂಕಿನ ತಲಾ 5, ರಾಣೆಬೆನ್ನೂರ ತಾಲೂಕಿನ 4, ಹಿರೇಕೆರೂರ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ತಲಾ 3, ಬ್ಯಾಡಗಿ ತಾಲೂಕಿನಲ್ಲಿ 2 ಪ್ರಕರಣಗಳು ಹಾಗೂ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಹಿರೇಕುರುವತ್ತಿ ಗ್ರಾಮದ ಇಬ್ಬರಿಗೆ ಸೋಮವಾರ ಕರೊನಾ ದೃಢಪಟ್ಟಿವೆ.
ಸೋಂಕಿತರ ವಿವರ: ಹಾವೇರಿ ನಗರದಲ್ಲಿ 7, ದೇವಗಿರಿ 5, ಗುತ್ತಲ 2, ತಿಮ್ಮಾಪುರ, ಬಸಾಪುರ, ಎಂಜಿ ನೀರಲಗಿ, ಅಗಡಿಯಲ್ಲಿ ತಲಾ ಒಬ್ಬರಿಗೆ, ಹಾನಗಲ್ಲ, ತಿಳವಳ್ಳಿ, ಅಕ್ಕಿಆಲೂರು, ಬೊಮ್ಮನಹಳ್ಳಿ, ಚಿಕ್ಕಉಲ್ಲಾಳದಲ್ಲಿ ತಲಾ ಒಬ್ಬರಿಗೆ, ಸವಣೂರ, ಬೇವಿನಹಳ್ಳಿ, ತೆವರಮೆಳ್ಳಿಹಳ್ಳಿ, ಕಲಿವಾಳ, ಶಿರಬಡಗಿ ತಲಾ ಒಬ್ಬರಿಗೆ, ರಾಣೆಬೆನ್ನೂರ ತಾಲೂಕಿನ ಯರೇಕುಪ್ಪಿಯಲ್ಲಿ 3, ಹನುಮಾಪುರದಲ್ಲಿ ಒಬ್ಬರಿಗೆ, ಹಿರೇಕೆರೂರ, ಕೋಡಮಗ್ಗಿ, ತಿಪ್ಪಾಯಿಕೊಪ್ಪದ ತಲಾ ಒಬ್ಬರಿಗೆ, ಶಿಗ್ಗಾಂವಿ, ಕಂಕಣವಾಡ, ಬೆಳಗಲಿಯಲ್ಲಿ ತಲಾ ಒಬ್ಬರಿಗೆ, ಬ್ಯಾಡಗಿ ಪಟ್ಟಣ ಹಾಗೂ ಆಣೂರಿನಲ್ಲಿ ತಲಾ ಒಬ್ಬರಿಗೆ ಸೋಮವಾರ ಸೋಂಕು ದೃಢಪಟ್ಟಿದೆ.
ಹಾವೇರಿ ತಾಲೂಕು ದಿಡಗೂರ ಗ್ರಾಮದ 38 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಆ. 14ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಆ. 16ರಂದು ಮೃತಪಟ್ಟಿದ್ದಾರೆ. ಹಾನಗಲ್ಲ ತಾಲೂಕು ತಿಳವಳ್ಳಿಯ 62 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಆ. 16ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಮೃತಪಟ್ಟಿದ್ದಾರೆ. ಹಿರೇಕೆರೂರ ತಾಲೂಕು ಕೋಡಮಗ್ಗಿಯ 53 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಆ. 15ರಂದು ಜಿಲ್ಲಾಸ್ಪತ್ರೆ ದಾಖಲಾಗಿದ್ದರು. ಆ. 16ರಂದು ಮೃತಪಟ್ಟಿದ್ದಾರೆ. ರಾಣೆಬೆನ್ನೂರು ಕುರಬಗೇರಿಯ 68 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಆ. 12ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ. 16ರಂದು ಮೃತಪಟ್ಟಿದ್ದಾರೆ.
ತಹಸೀಲ್ದಾರ್ ಕಚೇರಿ ಸೀಲ್ಡೌನ್: ಹಾವೇರಿ ತಹಸೀಲ್ದಾರ್ ಕಚೇರಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಗ್ರಾಮಲೆಕ್ಕಾಧಿಕಾರಿಗೆ ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿಯನ್ನು ಸೋಮವಾರ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ, 7ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಎಸಿ, ತಹಸೀಲ್ದಾರ್ ಸಹ ಪಾಸಿಟಿವ್ ಬಂದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಬಂದಿರುವ ಕಾರಣ ಅವರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.