

ವಿಜಯವಾಣಿ ಸುದ್ದಿಜಾಲ ಹಾವೇರಿ
ಜಿಲ್ಲೆಯಲ್ಲಿ ಬುಧವಾರ 137 ಜನರಿಗೆ ಕರೊನಾ ದೃಢಪಟ್ಟಿದೆ. 29 ಜನರು ಗುಣವಾಗಿ ಬಿಡುಗಡೆ ಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಈವರೆಗೆ 2,772 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 1,744 ಜನರು ಸೋಂಕಿನಿಂದ ಗುಣ ವಾಗಿದ್ದಾರೆ. ಒಟ್ಟು 62 ಜನರು ಮೃತಪಟ್ಟಿದ್ದಾರೆ. 966 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 531 ಸೋಂಕಿತರು ಹೋಂ ಐಸೋಲೇಷನ್ನಲ್ಲಿ, 435 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತಾಲೂಕುವಾರು ಸೋಂಕಿತರ ವಿವರ: ಹಾವೇರಿ ತಾಲೂಕಿನಲ್ಲಿ 43, ರಾಣೆಬೆನ್ನೂರ 29, ಶಿಗ್ಗಾಂವಿ 22, ಸವಣೂರ 15, ಬ್ಯಾಡಗಿ 13, ಹಿರೇಕೆರೂರ 10, ಹಾನಗಲ್ಲ ತಾಲೂಕಿನಲ್ಲಿ 4 ಹಾಗೂ ಹೂವಿನಹಡಗಲಿ ತಾಲೂಕು ಹಿರೇಕುರವತ್ತಿ ಗ್ರಾಮದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಬುಧವಾರದ ಸೋಂಕಿತರಲ್ಲಿ ವೈದ್ಯ, ಲ್ಯಾಬ್ ಟೆಕ್ನಿಷಿಯನ್, ಪ್ರಿನ್ಸಿಪಾಲ್, ಕೆಇಬಿ, ನ್ಯಾಯಾಂಗ, ಶಿಕ್ಷಣ, ಆರೋಗ್ಯ, ರೈಲ್ವೆ ಇಲಾಖೆ ಸಿಬ್ಬಂದಿ ಇದ್ದಾರೆ. ಬುಧವಾರ ಸೋಂಕಿನಿಂದ ಗುಣವಾಗಿ ಶಿಗ್ಗಾಂವಿ ಹಾಗೂ ರಾಣೆಬೆನ್ನೂರ ತಲಾ 2, ಹಾವೇರಿ 6, ಬ್ಯಾಡಗಿ ಹಾಗೂ ಹಾನಗಲ್ಲ ತಲಾ 1, ಹಿರೇಕೆರೂರ 5 ಹಾಗೂ ಸವಣೂರ ತಾಲೂಕಿನ 12 ಜನರು ಬಿಡುಗಡೆ ಹೊಂದಿದ್ದಾರೆ.
ಮೂವರ ಸಾವು: ಹಾವೇರಿ ತಾಲೂಕು ನಾಗೇಂದ್ರನಮಟ್ಟಿಯ 47 ವರ್ಷದ ಪುರುಷ, ಅಶ್ವಿನಿನಗರದ 60 ವರ್ಷದ ಪುರುಷ, ಬ್ಯಾಡಗಿ ತಾಲೂಕು ಬೆಟ್ಟದಮಲ್ಲೇಶ್ವರ ನಗರದ 45 ವರ್ಷದ ಪುರುಷ ಮೃತಪಟ್ಟಿದ್ದಾರೆ.