ಬ್ರಿಟನ್​ನಿಂದ ಕರ್ನಾಟಕಕ್ಕೆ ಬಂದ ವ್ಯಕ್ತಿ, ಸಹೋದರನಿಗೆ ಸೋಂಕು ದೃಢ

Corona
Published on

ಮೈಸೂರು: ಮಹಾಮಾರಿ ಕರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದರ ಬೆನ್ನಲ್ಲೇ ಹೊಸ ರೂಪಾಂತರ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಬ್ರಿಟನ್​ ಕರೊನಾ ಎಂದೇ ಕರೆಯಲ್ಪಡುವ ರೂಪಾಂತರ ಸೋಂಕಿನ ಭೀತಿ ರಾಜ್ಯವನ್ನೂ ಕಾಡುತ್ತಿದೆ.

ಬ್ರಿಟನ್​ನಿಂದ ಮೈಸೂರಿಗೆ ಬಂದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ದೃಢಪಟ್ಟಿದ್ದು, ಅವರ ಸಹೋದರನಿಗೂ ಸೋಂಕು ಕಾಣಿಸಿಕೊಂಡಿದೆ. ಇಬ್ಬರ ಗಂಟಲು ದ್ರವದ ಮಾದರಿಯನ್ನು ಜೀನೊಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಇದನ್ನೂ ಓದಿರಿ ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ದರ್ಶನ್​

ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಮೂವರು, ದ್ವಿತೀಯ ಸಂಪರ್ಕದಲ್ಲಿ ಮೂವರು ಇದ್ದಾರೆ. ಈ ವ್ಯಕ್ತಿ ಡಿ.14 ರಂದು ಮೈಸೂರು ನಗರಕ್ಕೆ ಬಂದಿದ್ದು, ರೂಪಾಂತರಗೊಂಡ ಕೋವಿಡ್ ಸೋಂಕು ಕಂಡು ಬಂದಿದೆಯೇ? ಇಲ್ಲವೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಡಿ.29ಕ್ಕೆ ವರದಿ ಬರುವ ನಿರೀಕ್ಷೆ ಇದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net