ಜಿಲ್ಲಾಧಿಕಾರಿಗೂ ಕೋವಿಡ್​ ಸೋಂಕು, ಬೆಚ್ಚಿಬೀಳಿಸುತ್ತೆ ಟ್ರಾವೆಲ್​ ಹಿಸ್ಟರಿ!

CORONA
Published on

ಬೆಂಗಳೂರು: ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿಗೂ ಕೋವಿಡ್​ ಸೋಂಕು ದೃಢಪಟ್ಟಿದ್ದು, ಇವರ ಟ್ರಾವೆಲ್​ ಹಿಸ್ಟರಿ ಪತ್ತೆ ಕಗ್ಗಂಟಾಗಿದೆ.

ಕಳೆದೆರಡು ದಿನದಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ತಪಾಸಣೆ ಮಾಡಿಸಿಕೊಂಡಿದ್ದರು. ಗುರುವಾರ ಸೋಂಕು ದೃಢಪಟ್ಟಿರುವುದರಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂ.27ರಂದು ದೇವನಹಳ್ಳಿ ವಿಮಾನ ನಿಲ್ದಾಣ​ ಬಳಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಜಿಲ್ಲಾಧಿಕಾರಿ, ಕಾರ್ಯಕ್ರಮದಲ್ಲಿ ಸಾಕಷ್ಟು ಓಡಾಟ ನಡೆಸಿದ್ದರು. ಮುಖ್ಯಮಂತ್ರಿ ಹಾಗೂ ಹಲವು ಸಚಿವರು ಕಾರ್ಯಕ್ರಮದಲ್ಲಿದ್ದರು. ಇದನ್ನೂ ಓದಿರಿ ವಿಧಾನಸೌಧ ಬಳಿ ಅಪಘಾತ, ಎಎಸ್ಐ ಸೇರಿ ನಾಲ್ವರಿಗೆ ಗಾಯ

ಸದ್ಯ ಕರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿರುವ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಇಂಥ ಸಂದರ್ಭದಲ್ಲಿ ಯಾರೂ ಎದೆಗುಂದಬಾರದು. ಧೈರ್ಯವಾಗಿ ಪರಿಸ್ಥಿತಿ ಎದುರಿಸಬೇಕು. ಆದಷ್ಟು ಬೇಗ ಗುಣಮುಖನಾಗಿ ಸೇವೆಗೆ ಹಿಂತಿರುಗುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದ್ದಾರೆ.

ಬೆಂ.ಗ್ರಾಮಾಂತರ ಜಿಲ್ಲಾಡಳಿತ ಭವನಕ್ಕೂ ಕರೊನಾ ಕಾಲಿಟ್ಟಿದ್ದರಿಂದ ತಹಸೀಲ್ದಾರ್​, ಎಸಿ, ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೂ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಭವನ ಸೀಲ್​ಡೌನ್​ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಪ್ರವಾಸಿ ಮಂದಿರ, ಕೆಂಪೇಗೌಡ ವಿಮಾನ ನಿಲ್ದಾಣ ಸೇರಿ ಎಲ್ಲ ಕಡೆಗಳಲ್ಲೂ ಜಿಲ್ಲಾಧಿಕಾರಿ ಸಂಚರಿಸಿದ್ದು, ಟ್ರಾವೆಲ್​ ಹಿಸ್ಟರಿ ಪತ್ತೆ ಕಗ್ಗಂಟಾಗಿದೆ. ಡಿಸಿ ಕಾರು ಚಾಲಕ ಹಾಗೂ ಗನ್​ಮ್ಯಾನ್​ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net