‘ಕರೊನಾ ಮತ್ ರೋನಾ’ ಹಾಡು ಬಿಡುಗಡೆ ಮಾಡಿದ ಭಾಸ್ಕರ್​ರಾವ್

Bhaskar Rao 24 may 20
Published on

ಬೆಂಗಳೂರು: ಕಲಾವಿದರಾದ ವಿಕ್ರಮ್ ಸೂರಿ ಹಾಗೂ ನಮಿತಾ ರಾವ್ ಅವರ ‘ನವಿ ನಿರ್ವಿುತಿ’ ಸಂಸ್ಥೆ ವತಿಯಿಂದ ಚೌಕಾಬಾರ ಸಿನಿಮಾ ತಂಡದ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ‘ಕರೊನಾ ಮತ್ ರೋನ’ ಎಂಬ ವಿಡಿಯೋ ಹಾಡನ್ನು ಸಿದ್ಧಪಡಿಸಿದ್ದಾರೆ. ಇತ್ತೀಚೆಗಷ್ಟೇ ಈ ಹಾಡನ್ನು ಬೆಂಗಳೂರು ನಗರ ಕಮಿಷನರ್ ಭಾಸ್ಕರ್ ರಾವ್ ಬಿಡುಗಡೆಗೊಳಿಸಿ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.

ಕರೊನಾದಿಂದಾಗಿ ಜನಸಾಮಾನ್ಯರು ಖಿನ್ನತೆಗೆ ಒಳಗಾಗುತ್ತಿರುವುದನ್ನು ನೋಡಿ, ಅವರಿಗೆ ಮನನರಂಜನೆ ಮೂಲಕ ಉಪಯುಕ್ತ ಮಾಹಿತಿ ನೀಡಿವ ಉದ್ದೇಶದಿಂದ ಈ ಹಾಡನ್ನು ಸಿದ್ಧಪಡಿಸಲಾಗಿದ್ದು, ವೈದ್ಯರು, ಆರಕ್ಷಕರು, ಪೌರ ಕಾರ್ವಿುಕರು, ರಾಷ್ಟ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಂದನೆಗಳನ್ನು ಸಲ್ಲಿಸುವುದೂ ಈ ಹಾಡಿನ ಉದ್ದೇಶ.

ಕಲಾವಿದರಾದ ನಮಿತಾ ರಾವ್, ವಿಕ್ರಮ್ ಸೂರಿ, ಸಂಜಯ ಸೂರಿ, ಶಶಿಧರ್ ಕೋಟೆ, ಮಧು ಹೆಗಡೆ, ದಮಯಂತಿ ನಾಗರಾಜ್, ಕೀರ್ತಿ ಭಾನು, ಪ್ರದೀಪ್, ರಘು ಭಟ್, ಕಾವ್ಯಾ ರಮೇಶ್, ಆಡಮ್ ಪಾಷ, ಪ್ರಭಂಜನ್, ಹರೀಶ್ ಭಟ್ ಹಾಡಿನಲ್ಲಿದ್ದಾರೆ. ವಿಕ್ರಮ್ ಸೂರಿ ಸಾಹಿತ್ಯ ಬರೆದು, ಪರಿಕಲ್ಪನೆ ಹಾಗೂ ನಿರ್ದೇಶನವನ್ನೂ ಮಾಡಿದ್ದಾರೆ. ಅಶ್ವಿನ್ ಪಿ ಕುಮಾರ್ ಸಂಗೀತ, ನಕುಲ್ ಅಭ್ಯಂಕರ್ ಮಿಕ್ಸಿಂಗ್, ಮಾಸ್ಟರಿಂಗ್, ರವಿರಾಜ್ ಹೊಂಬಾಳ ಸಂಕಲನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net