

ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ನ್ಯಾಯಾಲಯಕ್ಕೆ ಭೇಟಿ ನೀಡುವ ಕಕ್ಷಿದಾರರರು, ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು ಮತ್ತು ಸಂದರ್ಶಕರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ ತಪಾಸಣೆ ನಡೆಸಲಾಗುತ್ತಿದೆ.
ಹೈಕೋರ್ಟ್ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಮಂಗಳವಾರ ರಾಜ್ಯ ಆರೋಗ್ಯ ಇಲಾಖೆಯ ನಾಲ್ಕೈದು ಸಿಬ್ಬಂದಿ ಸಂದರ್ಶಕರ ದೇಹದ ಉಷ್ಣಾಂಶ ತಪಾಸಣೆ ನಡೆಸಿದರು. ಬೆಳಗ್ಗೆ ಕಲಾಪ ಆರಂಭವಾಗುವ ಮುನ್ನ ಹಾಗೂ ಮಧ್ಯಾಹ್ನ ಭೋಜನ ವಿರಾಮದ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಇದನ್ನು ಪರಿಶೀಲಿಸಿದರು.
ಹೈಕೋರ್ಟ್ಗೆ ಭೇಟಿ ನೀಡುವವರಿಗೆ ಥರ್ವಮೀಟರ್ನಿಂದ ದೇಹದ ಉಷ್ಣಾಂಶ ಪರಿಶೀಲಿಸಲಾಗುತ್ತದೆ. ಹೆಚ್ಚಿರುವವರ ಹೆಸರು, ವಿಳಾಸ ದಾಖಲಿಸಿಕೊಂಡು ಜ್ವರ, ಶೀತ ಹಾಗೂ ಕೆಮ್ಮು ಇದೆಯಾ ಎಂದು ತಪಾಸಣೆ ನಡೆಸಲಾಗುತ್ತದೆ. ಈ ಲಕ್ಷಣ ಇರುವುದು ದೃಢಪಟ್ಟರೆ ಕೂಡಲೇ ರಾಜೀವ್ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸ ಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
ವಕೀಲರ ಸಂಖ್ಯೆ ಕಡಿಮೆ: ಕೆಮ್ಮ, ಶೀತ ಮತ್ತು ಜ್ವರದ ಲಕ್ಷಣ ಕಾಣಿಸಿಕೊಂಡ ವಕೀಲರಿಗೆ ಕೋರ್ಟ್ ಆವರಣದೊಳಗೆ ಪ್ರವೇಶಿಸದಂತೆ ಸಲಹೆ ನಿಡಲಾಗಿದೆ. ಕೋರ್ಟ್ ಹಾಲ್ಗಳ ಪ್ರವೇಶಕ್ಕೆ ಕಕ್ಷಿದಾರರಿಗೆ ನಿರ್ಬಂಧ ಹೇರಿರುವ ಹಿನ್ನೆಲೆ ಯಲ್ಲಿ ಹಾಗೂ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸುತ್ತಿರು ವುದರಿಂದ ಹೈಕೋರ್ಟ್ನಲ್ಲಿ ವಕೀಲರು ಮತ್ತು ಕಕ್ಷಿದಾರರ ಸಂಖ್ಯೆ ಕಡಿಮೆ ಇತ್ತು. ಹೈಕೋರ್ಟ್ಗೆ ಭೇಟಿ ನೀಡಿದ ಎಲ್ಲ ವಕೀಲರ ದೇಹದ ಉಷ್ಣಾಂಶ ತಪಾಸಣೆ ನಡೆಸಲಿಲ್ಲ.