VIDEO: ಮಧ್ಯಪ್ರದೇಶ ಶಾಸಕರನ್ನು ಭೇಟಿ ಮಾಡಲೆತ್ನಿಸಿದ ದಿಗ್ವಿಜಯ ಸಿಂಗ್ ಬಂಧನ​

DigvijaySingh infront of ramda hotel 1 BNG MP Crisis 18 MAR 20
Published on

ಬೆಂಗಳೂರು: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದು, ಬಂಡಾಯದ ಬಾವುಟ ಹಾರಿಸಿದ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಇರುವ ಕಾರಣ ಬುಧವಾರ ಹಲವು ನಾಟಕೀಯ ಬೆಳವಣಿಗೆಗಳು ನಡೆದವು.

ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣಾ ಕಣಕ್ಕೆ ಪ್ರವೇಶಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರಿಗೆ ಇದೀಗ ಸೋಲಿನ ಭೀತಿ ಎದುರಾಗಿದ್ದು, ಅವರು ಭಿನ್ನಮತೀಯ ಶಾಸಕರ ಜತೆಗೆ ಮಾತುಕತೆಗೆ ಬುಧವಾರ ಬೆಳಗ್ಗೆಯೇ ಆಗಮಿಸಿದ್ದರು. ಕಾಂಗ್ರೆಸ್​ ಪಕ್ಷದ ಟ್ರಬಲ್ ಶೂಟರ್ ಎಂದೇ ಜನಪ್ರಿಯರಾಗಿರುವ ಡಿ.ಕೆ.ಶಿವಕುಮಾರ್ ಈಗ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕಾರಣ, ಭಿನ್ನಮತೀಯ ಶಾಸಕರ ಮನವೊಲಿಸಿ ವಾಪಸ್​ ಕರೆದುಕೊಂಡು ಹೋಗುವ ವಿಚಾರವೀಗ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ.

ದಿಗ್ವಿಜಯ ಸಿಂಗ್ ಅವರನ್ನು ಡಿ.ಕೆ.ಶಿವಕುಮಾರ್ ಬರಮಾಡಿಕೊಂಡು, ಭಿನ್ನಮತೀಯ ಶಾಸಕರು ಉಳಿದುಕೊಂಡಿರುವ ರಮಡಾ ಹೋಟೆಲ್​ಗೆ ತೆರಳಿದ ವೇಳೆ ಅಲ್ಲಿದ್ದ ಪೊಲೀಸರು ಇವರನ್ನು ಒಳಗೆ ಬಿಟ್ಟಿರಲಿಲ್ಲ. ಇದನ್ನು ಪ್ರತಿಭಟಿಸಿ ದಿಗ್ವಿಜಯ ಸಿಂಗ್ ಮತ್ತು ಇತರೆ ನಾಯಕರು ಆ ಹೋಟೆಲ್ ಎದುರೇ ಧರಣಿ ಕುಳಿತಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಇದೀಗ ಅವರನ್ನು ಬಂಧಿಸಿ ಕರೆದೊಯ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net