More

    ಬೆಂಗಳೂರಿನಲ್ಲಿ ಮಧ್ಯಪ್ರದೇಶ ರಾಜಕೀಯದ ಹೈಡ್ರಾಮಾ..

    ಬೆಂಗಳೂರು: ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರಮಡಾ ಹೋಟೆಲ್​ನಲ್ಲಿ ಉಳಿದುಕೊಂಡಿದ್ದು, ಅವರನ್ನು ಒತ್ತೆಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬುಧವಾರ ಬೆಳಗ್ಗೆಯೇ ಆ ಹೋಟೆಲ್​ ಎದುರು ಧರಣಿ ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಮಧ್ಯಪ್ರದೇಶದ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​ ಮತ್ತು ಇತರರು ಹೋಟೆಲ್ ಎದುರು ಇದ್ದು, ಒಳಗಿರುವ ಶಾಸಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.

    ಇದಕ್ಕೂ ಮುನ್ನ, ಬುಧವಾರ ಬೆಳ್ಳಂಬೆಳಗ್ಗೆಯೇ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ದಿಗ್ವಿಜಯ ಸಿಂಗ್​ ಅವರನ್ನು ಡಿ.ಕೆ.ಶಿವಕುಮಾರ್ ಮತ್ತು ಇತರೆ ನಾಯಕರು ಬರಮಾಡಿಕೊಂಡರು. ನಂತರ ಎಲ್ಲರೂ ಒಟ್ಟಾಗಿ ರಮಡಾ ಹೋಟೆಲ್​ ಗೆ ತೆರಳಿದ್ದು, ಅಲ್ಲಿದ್ದ ಪೊಲೀಸರು ಈ ನಾಯಕರನ್ನು ಹೋಟೆಲ್ ಪ್ರವೇಶಿಸದಂತೆ ತಡೆದರು. ಇದನ್ನು ವಿರೋಧಿಸಿ ಅಲ್ಲಿಯೇ ಕಾಂಗ್ರೆಸ್ ನಾಯಕರು ಧರಣಿ ಆರಂಭಿಸಿದರು.

    ಈ ನಡುವೆ ದಿಗ್ವಿಜಯ ಸಿಂಗ್ ಅವರು ಸುದ್ದಿಗಾರರ ಜತೆ ಮಾತನಾಡಿ, ನಾನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದೇನೆ. ಮಾರ್ಚ್ 26ರಂದು ಮತದಾನವಿದೆ. ನನ್ನ ಶಾಸಕರನ್ನು ಇಲ್ಲಿ ಕೂಡಿಹಾಕಲಾಗಿದೆ. ಅವರು ನನ್ನ ಜತೆ ಮಾತನಾಡಲು ಇಚ್ಛಿಸಿದ್ದಾರೆ. ಅವರ ಫೋನ್​ಗಳನ್ನೂ ಕಸಿದುಕೊಳ್ಳಲಾಗಿದೆ. ಶಾಸಕರಿಗೆ ಬೆದರಿಕೆ ಇದೆ ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಕ್ಕೆ ಪೊಲೀಸರು ಬಿಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. (ಏಜೆನ್ಸೀಸ್)

    ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ ಎಂದ ಮಧ್ಯಪ್ರದೇಶ ಕಾಂಗ್ರೆಸ್​; ಬಿಜೆಪಿ ವಿರುದ್ಧ ಸುಪ್ರೀಂಕೋರ್ಟ್​ಗೆ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts