More

    ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಇಂದೇನಾಗಲಿದೆ?: ಗಮನಾರ್ಹ ಹತ್ತು ಅಂಶಗಳು ಇಲ್ಲಿವೆ…

    ಭೋಪಾಲ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಭಿನ್ನಮತದಿಂದಾಗಿ ಅತಂತ್ರವಾಗಿದ್ದು, ಇಂದು ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಸೂಚಿಸಿದ್ದಾರೆ. ಒಂದೊಮ್ಮೆ ಇಂದು ಫ್ಲೋರ್​ಟೆಸ್ಟ್ ನಡೆಸುವಲ್ಲಿ ಮುಖ್ಯಮಂತ್ರಿ ಕಮಲನಾಥ್ ವಿಫಲವಾದರೆ, ಅವರಿಗೆ ಬಹುಮತ ಇಲ್ಲ ಎಂಬುದು ಬಹಿರಂಗವಾದಂತೆ. ಸೋಮವಾರ (ಮಾ.16) ಕಮಲನಾಥ್ ಅವರು ಫ್ಲೋರ್​ ಟೆಸ್ಟ್ ಎದುರಿಸಬೇಕಾಗಿತ್ತು. ಆದರೆ, ತರಾತುರಿಯ ಬೆಳವಣಿಗೆಯಲ್ಲಿ ವಿಧಾನಸಭೆ ಸ್ಪೀಕರ್​ ಅವರು ಕರೋನಾ ಕಾರಣ ಮುಂದಿಟ್ಟು ಕಲಾಪವನ್ನು ಮಾರ್ಚ್​ 26ರ ತನಕ ಮುಂದೂಡಿದ್ದರು. ಹೀಗಾಗಿ 10 ದಿನಗಳ ಕಾಲಾವಕಾಶ ಸಿಕ್ಕಿತು ಎಂದೇ ಭಾವಿಸಲಾಗಿತ್ತು. ಆದರೆ, ಮಂಗಳವಾರವೇ ಫ್ಲೋರ್ ಟೆಸ್ಟ್ ನಡೆಸುವಂತೆ ರಾಜ್ಯಪಾಲರು ಸೂಚಿಸಿರುವುದು ಕಮಲನಾಥರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಂತಹ ಸನ್ನಿವೇಶದಲ್ಲಿ ಮಧ್ಯಪ್ರದೇಶದ ರಾಜಕೀಯ ಪರಿಸ್ಥಿತಿಗೆ ಸಂಬಂಧಿಸಿ ಕಳೆದ ಎರಡು ದಿನಗಳಲ್ಲಿ ನಡೆದ ಹತ್ತು ಪ್ರಮುಖ ಬೆಳವಣಿಗೆಗಳ ಅಂಶಗಳು ಇಲ್ಲಿವೆ.

    1. ಮುಖ್ಯಮಂತ್ರಿ ಕಮಲನಾಥ್ ಅವರಿಗೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರಿಂದ ಪತ್ರ- ಮಾರ್ಚ್ 17ರಂದು ಬಹುಮತ ಸಾಬೀತುಪಡಿಸಲು ಸೂಚನೆ. ಒಂದೊಮ್ಮೆ ಪಾಲಿಸದಿದ್ದಲ್ಲಿ, ಬಹುಮತ ಇಲ್ಲವೆಂದು ಪರಿಗಣಿಸುವುದಾಗಿ ಹೇಳಿಕೆ.
    2. ಫ್ಲೋರ್​ಟೆಸ್ಟ್​ ನಡೆಸುವಂತೆ ಸೂಚಿಸಿದ್ದು ಪಕ್ಷಪಾತತನ ಎಂಬ ಕಮಲನಾಥ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳು ಅಸಾಂವಿಧಾನಿಕ ಪದಗಳನ್ನು ಬಳಸುತ್ತಿದ್ದು, ಫ್ಲೋರ್​ಟೆಸ್ಟ್ ನಡೆಸದೇ ಇರುವುದಕ್ಕೆ ಅವರು ನೀಡುತ್ತಿರುವ ಕಾರಣಗಳು ಸಕಾರಣವಲ್ಲ ಎಂದಿದ್ದಾರೆ.
    3. ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಕಮಲನಾಥ್ ಅವರು ಸುದ್ದಿಗಾರರ ಜತೆಗೆ ಮಾತನಾಡಿದ್ದು, ರಾಜಕೀಯ ಸನ್ನಿವೇಶಗಳ ಕುರಿತು ಮಾತನಾಡಿದ್ದೇವೆ. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಕ್ಕೆ ರಾಜ್ಯಪಾಲರಿಗೆ ಧನ್ಯವಾದ ಹೇಳಿದ್ದೇನೆ. ಸಂವಿಧಾನದ ಚೌಕಟ್ಟಿನಲ್ಲೇ ನಾವು ಕೆಲಸ ಮಾಡುತ್ತಿದ್ದೇವೆ. ಅದನ್ನು ಮೀರಿ ಹೋಗಲಾಗದು. ಬಿಜೆಪಿಯವರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಇಂದಿನ ತನಕ ನಮಗೆ ಸಂಖ್ಯಾಬಲವಿದೆ ಎಂದು ಹೇಳಿದರು.
    4. ಯಾರಾದರು ನಮಗೆ(ಕಾಂಗ್ರೆಸ್​) ಸಂಖ್ಯಾಬಲ ಇಲ್ಲ ಎಂದು ಆರೋಪ ಮಾಡಿದರೆ, ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು. ನಾನೇ ನಾನಾಗಿ ಏಕೆ ಫ್ಲೋರ್​ ಟೆಸ್ಟ್​ ಎದುರಿಸಲಿ? 16 ಶಾಸಕರಿಗೇನು ಸಮಸ್ಯೆ, ಅವರೇ ಮುಂದೆ ಬಂದು ಹೇಳಬೇಕಲ್ಲವೇ ಎಂದು ಕಮಲನಾಥ್ ಹೇಳಿದ್ದಾರೆ.
    5. ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಿದ ನಂತರ, ಸಿಂಧಿಯಾ ಅವರ ಬೆಂಬಲಿಗ ಶಾಸಕರು ಪಕ್ಷ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು, ಕಮಲನಾಥ್ ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ.
    6. ಶಿವರಾಜ್ ಸಿಂಗ್ ಚೌಹಾಣ್ ಸೇರಿ 106 ಶಾಸಕರು ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿದ್ದು, ಕಮಲನಾಥ್ ಸರ್ಕಾರ ಬಹುಮತ ಸಾಬೀತು ಪಡಿಸಲು ನಿರಾಕರಿಸಿದ್ದು, ಸಂವಿಧಾನದ ಘನತೆ ಎತ್ತಿ ಹಿಡಿವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸೋಮವಾರ ಕೋರಿದ್ದರು.
    7. ಕಮಲನಾಥ್ ಸರ್ಕಾರಕ್ಕೆ ಬಹುಮತವಿಲ್ಲ, ಅದು ಅಲ್ಪಮತಕ್ಕೆ ಕುಸಿದಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್.
    8. ಮಾಧ್ಯಮದವರ ಜತೆಗೆ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಕಮಲನಾಥ್ ಸರ್ಕಾರಕ್ಕೆ ಬಹುಮತವಿಲ್ಲ. ಕರೊನಾ ವೈರಸ್ ಕೂಡ ಸರ್ಕಾರವನ್ನು ಬಚಾವ್ ಮಾಡದು ಎಂದು ಹೇಳಿದ್ದರು.
    9. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸ್ಪೀಕರ್ ಕರೋನಾ ವೈರಸ್ ಸೋಂಕಿನ ಕಾರಣ ನೀಡಿ ಕಲಾಪವನ್ನು 10 ದಿನದ ಮಟ್ಟಿಗೆ ಮುಂದೂಡಿದ್ದರು.
    10. ಸ್ಪೀಕರ್ ಅವರ ನಿರ್ಧಾರದ ಕಾರಣ, ಬಿಜೆಪಿ ಸದಸ್ಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಕೂಡಲೇ ಫ್ಲೋರ್​ಟೆಸ್ಟ್ ನಡೆಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಅಹವಾಲು ಸಲ್ಲಿಸಿದ್ದಾರೆ. ಇದರ ವಿಚಾರಣೆ ಇಂದು ನಡೆಯಲಿದೆ. ಹೀಗಾಗಿ ಇಲ್ಲಿನ ರಾಜಕೀಯ ಬೆಳವಣಿಗೆಗಳು ಕುತೂಹಲವನ್ನು ಉಳಿಸಿಕೊಂಡಿವೆ.

    ಮಾ.26ರವರೆಗೆ ತೊಂದರೆಯಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಮಧ್ಯಪ್ರದೇಶ ಸಿಎಂ ಕಮಲನಾಥ್​ಗೆ ರಾಜ್ಯಪಾಲರಿಂದ ದೊಡ್ಡ ಶಾಕ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts