ಹಾಸನದಲ್ಲೂ ಖಾತೆ ತೆರೆದ ಕರೊನಾ, ಮುಂಬೈನಿಂದ ಬಂದ ಐವರಲ್ಲಿ‌ ಸೋಂಕು ದೃಢ

corona
Published on

ಹಾಸನ: ಮಾರಕ ಕರೊನಾದಿಂದ ದೂರವಿದ್ದ ಬಡವರ ಊಟಿ ಹಾಸನದಲ್ಲಿ ಮಂಗಳವಾರ ಐದು ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಜಿಲ್ಲೆ ರೆಡ್ ಜೋನ್‌ಗೆ ಸೇರಿದೆ. ಮೇ 8 ರಂದು ಚನ್ನರಾಯಪಟ್ಟಣ ಗಡಿ ಮೂಲಕ ಜಿಲ್ಲೆಗೆ ಬಂದಿದ್ದ ಒಂದೇ ಕುಟುಂಬದ ಐವರಲ್ಲಿ ಸೋಂಕು ಪತ್ತೆಯಾಗಿದೆ. 36, 45 ವರ್ಷದ ಪುರುಷರು, 4 ವರ್ಷದ ಮಗು, 27 ವರ್ಷದ ಮಹಿಳೆ ಹಾಗೂ 7 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.

ಮುಂಬೈನಿಂದ ಬಂದಿದ್ದ ಅವರನ್ನು ಗಡಿಯಲ್ಲೇ ವಶಕ್ಕೆ ಪಡೆದು ಕ್ವಾರೆಂಟೈನ್ ಮಾಡಲಾಗಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. 130 ಜನರನ್ನು ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಐವರ ವರದಿ ಪಾಸಿಟಿವ್ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net