ವಿದ್ಯುತ್ ತಂತಿ ಸ್ಪರ್ಶಿಸಿ ನೌಕರ ಸಾವು

Shivaputra Houlagi
Published on


ಕಲಬುರಗಿ : ಕರಜಗಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸರ್ಕಾರಿ ಆಸ್ಪತ್ರೆ ಡಿ ಗ್ರೂಪ್ ನೌಕರನೊಬ್ಬ ಮೃತಪಟ್ಟಿದ್ದಾನೆ. ಮಾಶಾಳ ಗ್ರಾಮದ ಶಿವಪುತ್ರ ಹೌಳಗಿ (೩೦) ಮೃತಪಟ್ಟವ. ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ. ವರ್ಷದ ಹಿಂದಷ್ಟೇ ಮದುವೆಯಾಗಿ ಸುಖಿ ಜೀವನ ನಡೆಸುತ್ತಿದ್ದ. ಕರಜಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ ಈತ ಈ ಹಿಂದೆ ಉಡಚಣ ಸೇರಿ ಸುಮಾರು ೧೦ ವರ್ಷದಿಂದ ಸೇವೆ ಸಲ್ಲಿಸಿದ್ದಾನೆ. ಎಂದಿನAತೆ ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಬಂದಾಗ ನೀರು ಖಾಲಿಯಾಗಿತ್ತು. ಮೇಲ್ಛಾವಣಿ ಹತ್ತಿ ಸಿಂಟೆಕ್ಸ್ಗೆ ನೀರು ತುಂಬಲು ಹೋಗಿದ್ದಾಗ ಮೇನ್ ಲೈನ್ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net