ಪೊಸಳ್ಳಿಯಲ್ಲಿ ಬಳ್ಳಿ ಮುಕ್ತ ಟವರ್

New Project (41)
Published on

ಬಂಟ್ವಾಳ: ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯದ ಭವನದ ಬಳಿ ಬಳ್ಳಿ ಆವರಿಸಿಕೊಂಡು ಅಪಾಯಕಾರಿಯಾಗಿದ್ದ ವಿದ್ಯುತ್ ಟವರ್ ಈಗ ಬಳ್ಳಿ ಮುಕ್ತವಾಗಿದೆ. ಟವರ್ ತುಂಬಾ ತುಂಬಿಕೊಂಡಿದ್ದ ಬಳಿಯನ್ನು ಮೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಪೊಸಳ್ಳಿಯಲ್ಲಿ ತುಂಬಾ ಹಳೆಯ ವಿದ್ಯುತ್ ಟವರ್‌ಗಳು ಈಗಲೂ ಇದ್ದು ಕೆಲವು ದಿನಗಳ ಹಿಂದೆ ಭಾರಿ ಗಾಳಿ ಮಳೆಗೆ ರೈಲ್ವೆ ಟ್ರಾೃಕ್ ಬಳಿಯ ವಿದ್ಯುತ್ ಟವರೊಂದು ಮುರಿದು ಬಿದಿತ್ತು. ಅದರ ಪಕ್ಕದಲ್ಲೇ ಈ ಟವರ್ ಕೂಡ ತುಕ್ಕು ಹಿಡಿದಿರುವುದಲ್ಲದೆ ತುಂಬಾ ಬಳ್ಳಿಗಳು ಆವರಿಸಿಕೊಂಡು ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿ ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net