ಧರ್ಮ ನಡಾವಳಿಗೆ ಗ್ರಾಮಸ್ಥರ ಸಹಕಾರ

Ull_Nadavali
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪಟ್ಟೋರಿ ನೆಲದಲ್ಲಿ 490 ವರ್ಷಗಳ ಹಿಂದೆ ನಡೆಯುತ್ತಿದ್ದ ಧರ್ಮ ನಡಾವಳಿ ಗ್ರಾಮಸ್ಥರ ಸಹಕಾರದೊಂದಿಗೆ ಮತ್ತೆ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ ಮತ್ತು ಭಾಗ್ಯ. ದೈವ- ದೇವರ ಕೃಪೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಕ್ಷೇತ್ರ ಅಭಿವೃದ್ಧಿಯಾಗಲಿ ಎಂದು ಧರ್ಮ ನಡಾವಳಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಹೇಳಿದರು.

ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಧರ್ಮರಸರ ಮಾಡ ಕ್ಷೇತ್ರದಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ನೂತನವಾಗಿ ನಿರ್ಮಿಸಿರುವ ಉಳ್ಳಾಲ್ತಿ ಅಮ್ಮನ ಮುಗ ಹಾಗೂ ಧರ್ಮ ಅರಸರ ಕಿರುವಾಳ್ ಭಂಡಾರದ ಪ್ರತಿಷ್ಠಾಪನಾ ಕಲಾಷಾಭಿಷೇಕ ಹಾಗೂ ಉಳ್ಳಾಲ್ತಿ ಧರ್ಮ ಅರಸರ ಧರ್ಮ ನಡಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕೊಣಾಜೆ ಬೀಡುವಿನ ತಿರುಮಲೇಶ್ವರ ಭಟ್ ಹಾಗೂ ಧರ್ಮ ನಡಾವಳಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗಡಿಪ್ರಧಾನರಾದ ತಿಮ್ಮಯ್ಯ ಕಾಜವ ಯಾನೆ ದಿವಾಕರ ಭಂಡಾರಿ, ಗೌರವ ಸಲಹೆಗಾರ ಶ್ರೀನಿವಾಸ ಶೆಟ್ಟಿ ಪುಲ್ಲು, ಶ್ರೀನಿವಾಸ ಕಾಜವ ಪಟ್ಟೋರಿ, ವಿಜೇತ್ ಶೆಟ್ಟಿ ಮಂಜನಾಡಿ, ಕೋಶಾಧಿಕಾರಿ ಕರುಣಾಕರ ಕಾನ, ನಾಗಬ್ರಹ್ಮ ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಕಲಾಯಿ, ಮಹಿಳಾ ಸಮಿತಿ ಅಧ್ಯಕ್ಷೆ ನಿಶಾ ರವಿ ಕಾನ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಸಂಚಾಲಕ ಪ್ರವೀಣ್ ಪಟ್ಟೋರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net