ಕಾರ್ನಾಡು ಕ್ಷೇತ್ರದಲ್ಲಿ ಚಂಡಿಕಾ ಹವನ

Mul_Karnadu
Published on

ಮೂಲ್ಕಿ: ಕಾರ್ನಾಡು ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ತುಲಾಭಾರ ಸೇವೆ, ಚಂಡಿಕಾ ಹವನ ನಡೆಯಿತು.

ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಯಾತ್ರಾ ಬಲಿ, ಓಕುಳಿ, ಶ್ರೀ ಹರಿಹರ ದೇವರ ಸಮಾಗಮ, ಕಟ್ಟೆ ಪೂಜೆ, ಗಂಗಾರತಿ, ಅವಭೃತ ಸ್ನಾನ, ತೂಟೆದಾರ, ಜಳಕದ ಬಲಿ, ಧ್ವಜಾವರೋಹಣ, ಏಕಾಂತ ಸೇವೆ, ಮಹಾಮಂತ್ರಾಕ್ಷತೆ ನೆರವೇರಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ, ಅಶ್ವಿನಿ ಪೂಂಜಾ, ಆದಿತ್ಯ ಪೂಂಜಾ, ಅಪೂರ್ವ ಪೂಂಜಾ, ಸುನೀಲ್ ಆಳ್ವ, ವ್ಯವಸ್ಥಾಪನಾ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ ಸುನೀಲ್ ಆಳ್ವ, ಜೀವನ್ ಶೆಟ್ಟಿ, ವೈ.ಎನ್.ಸಾಲ್ಯಾನ್, ರವಿಕುಮಾರ್, ಶಶೀಂದ್ರ ಸಾಲ್ಯಾನ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ, ಹರ್ಷರಾಜ ಶೆಟ್ಟಿ, ಸುರೇಶ್ ರಾವ್, ವಿಷ್ಣುಮೂರ್ತಿ, ಪ್ರವೀಣ್ ಕೋಟ್ಯಾನ್, ಕೃಷ್ಣ ಶೆಟ್ಟಿ, ಉದಯಕುಮಾರ್ ಶೆಟ್ಟಿ ಆದಿಧನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net