ದೇವಸ್ಥಾನ ಪುನಃ ನಿರ್ಮಾಣಕ್ಕೆ ಸಹಕಾರ

counter
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಕೌಂಟರನ್ನು ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಉದ್ಘಾಟಿಸಿದರು.
Published on

ಪಡುಬಿದ್ರಿ: ಹನಿಗೂಡಿದರೆ ಹಳ್ಳ ಎಂಬ ರೀತಿಯಲ್ಲಿ ದೇವಸ್ಥಾನದ ಪುನಃ ನಿರ್ಮಾಣ ಇಲ್ಲಿನ ಎಲ್ಲ ಭಕ್ತರಿಂದ ನಡೆಯಬೇಕು. ಜೀರ್ಣೋದ್ಧಾರ ಕಾರ್ಯ ಸಮಷ್ಟಿಯದ್ದಾಗಬೇಕು. ಇಲ್ಲಿನ ಭಕ್ತರು ಸತ್ಕಾರ್ಯದಲ್ಲಿ ತಮ್ಮ ದೇಣಿಗೆ ನೀಡುವ ದೃಷ್ಟಿಯಲ್ಲಿ ಸೇವಾ ಕೌಂಟರ್ ತೆರೆಯಲಾಗಿದೆ ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಹೇಳಿದರು.

30 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ನವೀಕರಣ, ದೇಗುಲ ಪುನಃ ನಿರ್ಮಾಣ ಕಾರ್ಯ ನಡೆಯಲಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಕೌಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಉದ್ಘಾಟಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಆನುವಂಶಿಕ ಆಡಳಿತ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಅರ್ಚಕರಾದ ಪದ್ಮನಾಭ ಭಟ್, ವೈ.ಗುರುರಾಜ ಭಟ್, ವೈ.ಎನ್.ರಾಮಚಂದ್ರ ರಾವ್, ಕೃಷ್ಣಾಪುರ ಶಾಖಾ ಮಠದ ಯಾದವೇಂದ್ರ ಉಪಾಧ್ಯಾಯ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net