ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ

777777777
Published on

ಮಾಗಡಿ: ಗ್ರಾಮೀಣ ಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲೂಕಿನ ಚೌಡಿ ಬೇಗೂರುನಲ್ಲಿ ಭಾನುವಾರ ಲಿಂಗೈಕ್ಯ ಡಾ. ಶಿವಕುಮಾರ್ ಸ್ವಾಮೀಜಿ ಸಮುದಾಯ ಭವನ ಉದ್ಘಾಟನೆ ಹಾಗೂ ಶಿವಲಿಂಗಾ, ಶ್ರಿ ಚೌಡೇಶ್ವರಿ, ಬಸವೇಶ್ವರ ಸ್ವಾಮಿಯ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ನಾಗರಿಕರು ಮತ್ತಷ್ಟು ಬೇಡಿಕೆ ತಿಳಿಸಿದರೆ ಆ ಗ್ರಾಮದಲ್ಲಿ ನಿವೇಶನ ನೀಡಿದರೆ ಸರ್ಕಾರದಿಂದ ಸಮುದಾಯ ಭವನ ನಿರ್ಮಿಸುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ. ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಿದ ಸೇವಾ ಸಮಿತಿಯ ಎಲ್ಲ ಸದಸ್ಯರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಪುರಾತನ ದೇವಾಲಯ ಜಿರ್ಣೋದ್ಧಾರಗೊಳಿಸಿ ಭಕ್ತರಿಗೆ ಅನುಕೂಲಕಲ್ಪಿಸುವುದು ಸುಲಭದ ಮಾತಲ್ಲ, ದೇವಾಲಯದ ಸುತ್ತ ಕಾಂಪೌಂಡ್ ವ್ಯವಸ್ಥೆ ಸೇರಿ ದೇವಾಲಯಕ್ಕೆ ಬೇಕಾದ ಸಹಕಾರ ನೀಡುವುದಾಗಿ ಶಾಸಕ ಬಾಲಕೃಷ್ಣ ತಿಳಿಸಿದರು.

ಖಾನಿ ಮಠದ ವಿದ್ವಾನ್ ಬಸವರಾಜ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ದೇವರ ಮೇಲೆ ನಂಬಿಕೆ ಮುಖ್ಯ, ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಿದರೆ ಮಾತ್ರ ಮನುಷ್ಯ ಜನ್ಮ ಸಾರ್ಥಕತೆಯಾಗುತ್ತದೆ. ನಾವು ಮಾಡುವ ಸೇವೆಗಳು ನಿಸ್ವಾರ್ಥತೆಯಿಂದ ಕೂಡಿ ಸಮಾಜ ಮುಖಿ ಚಿಂತನೆ ಉಳ್ಳ ವ್ಯಕ್ತಿತ್ವ ತಮ್ಮದಾದರೆ ದೇವರು ಕೈಹಿಡಿದು ಮುನ್ನಡೆಸುತ್ತಾನೆ ಇಡೀ ಬ್ರಹ್ಮಂಡವನ್ನು ಮುನ್ನಡೆಸುವ ಕಾಣದ ಶಕ್ತಿಯೇ ದೈವ ಎಂದರು.

ಗ್ರಾಮದಿಂದ ತುಮಕೂರು, ಮಾಗಡಿಗೆ ಬಸ್ ಸಂಪರ್ಕಿಸುವಂತೆ ಗ್ರಾಮಸ್ಥರು ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಮನವಿ ಮಾಡಿದರು. ಗ್ರಾಮಸ್ಥರು ಸಮಯ ನಿಗದಿ ಪಡಿಸಿ ತಿಳಿಸಿದರೆ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಶ್ರೀ ಚೌಡೇಶ್ವರಿ ದೇವಿ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಶಿಕ್ಷಕ ರುದ್ರೇಶ್, ಬಿಜೆಪಿ ಮುಖಂಡ ಕೆ.ಆರ್. ಪ್ರಸಾದ್ ಗೌಡ, ಟಿಎಪಿಸಿಎಂಎಸ್ ನಿರ್ದೆಶಕ ಹೊನ್ನಾಪುರ ಶಿವಪ್ರಸಾದ್, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಪುಟ್ಟರಾಜು, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರಯ್ಯ,ಮಾಜಿ ಉಪಾಧ್ಯಕ್ಷೆ ಮಮತಾ ಕಿರಣ್, ಗ್ರಾಪಂ ಸದಸ್ಯೆ ಭಾಗ್ಯಮ್ಮ, ಮಲ್ಲಿಕಾರ್ಜುನಯ್ಯ, ಶಶಿಕುಮಾರ್, ಮಾರಸಂದ್ರ ಎಂಆರ್.ಶಿವಕುಮಾರ್, ಮಲ್ಲಿಕಾರ್ಜುನಯ್ಯ, ಪಾಲಣ್ಣ, ರುದ್ರೇಶ್, ಲೋಕೇಶ್, ಗಂಗರಾಜು, ಬೋಜಣ್ಣ, ಸೀನಪ್ಪ, ಕುದೂರು ಶೇಷಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net