

ಹೆಬ್ರಿ: ಮುನಿಯಾಲಿನ ಪ್ರಥಮ ದರ್ಜೆ ಕಾಲೇಜು ತನಕ ರಸ್ತೆ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದ್ದು, ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳವನ್ನಾಗಿ ರೂಪಿಸಲು ಸರ್ವರ ಸಹಕಾರ ಅಗತ್ಯ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಮುನಿಯಾಲು ಪೇಟೆಗೆ ಅಳವಡಿಸಿದ ಹೊಸ ದಾರಿದೀಪ ಗುರುವಾರ ಉದ್ಘಾಟಿಸಿ ಮಾತನಾಡಿದರು. ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್, ದಿನೇಶ್ ಪೈ ಮುನಿಯಾಲು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಹಿಂದು ಹೆಲ್ಪ್ ಲೈನ್ ಗೌರವಾಧ್ಯಕ್ಷ ಡಾ.ಸುದರ್ಶನ್ ಹೆಬ್ಬಾರ್, ವಿದ್ಯುತ್ ಗುತ್ತಿಗೆದಾರ ಸುರೇಂದ್ರ ಕುಲಾಲ್ ವರಂಗ, ಸತೀಶ್ ಪೂಜಾರಿ ಕಡ್ತಲ, ಪೂಜಾ ಶಂಕರ ಶೆಟ್ಟಿ, ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀಧರ ಪೈ ಮತ್ತು ರಿಕ್ಷಾ ಚಾಲಕ ಮಾಲೀಕರ ಸಂಘದ ಸದಸ್ಯರು ಇದ್ದರು. ಸುಹಾಸ ಶೆಟ್ಟಿ ಮುಟ್ಲುಪಾಡಿ ಸ್ವಾಗತಿಸಿದರು.