ಪೋದಾರ್ ಶಾಲೆಯಲ್ಲಿ ಬೆಂಕಿ ಇಲ್ಲದೆ ಅಡುಗೆ ಕಾರ್ಯಕ್ರಮ

IMG-20240831-WA0345
Published on

ಅರಸೀಕೆರೆ ಗ್ರಾಮಾಂತರ: ನಗರದ ಹೊರ ವಲಯದ ಹೆಂಜಗೊಂಡನಹಳ್ಳಿಯಲ್ಲಿರುವ ಪೋದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬೆಂಕಿ ಇಲ್ಲದೆ ಅಡುಗೆ ಮಾಡುವ ವಿಶೇಷ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಪ್ರಾಂಶುಪಾಲ ಸರೋಜಿನಿ ಅಂಗೋಲ್ಕರ್ ಉದ್ಘಾಟಿಸಿ ಮಾತಾನಾಡಿ, ಅಡುಗೆ ಮಾಡುವ ವಿಧಾನ, ಆಹಾರ ಬೇಯಿಸುವ ಕ್ರಮ, ಬೆಂಕಿ ಇಲ್ಲದೆ ಅಡುಗೆ ಮಾಡುವ ವಿಧಾನಗಳನ್ನು ವಿವರಿಸಿದರು.


ಮುಖ್ಯಶಿಕ್ಷಕಿ ಬಿ.ವಿ.ದೀಪಿಕಾ ಮಾತನಾಡಿ, ಆಹಾರ ತಜ್ಞರ ಪ್ರಕಾರ ಮಕ್ಕಳು ಪ್ರತಿದಿನ ಸಮತೋಲಿತ ಪ್ರಮಾಣದಲ್ಲಿ ಜೀವಸತ್ವಗಳು, ಖನಿಜಗಳು, ಕೊಬ್ಬು ಹಾಗೂ ಮತ್ತು ಪ್ರೋಟಿನ್‌ಗಳನ್ನು ಸೇವಿಸಬೇಕು. ಅವರ ದೈಹಿಕ ಬೆಳವಣಿಗೆಗೆ ಇದು ಬಹಳ ಮುಖ್ಯ. ಮಗು ದುರ್ಬಲವಾಗಿದ್ದರೆ ಆಹಾರದಲ್ಲಿ ತುಪ್ಪ, ಬೆಣ್ಣೆ, ಮೊಸರು, ಹಾಲು, ಬಾಳೆಹಣ್ಣು, ಸಿಹಿ ಗೆಣಸು ಹಾಗೂ ಹಸಿರು ತರಕಾರಿಗಳನ್ನು ಸೇವಿಸಬೇಕು ಎಂದರು.
ಶಿಕ್ಷಕರಾದ ಭಾಗ್ಯಜ್ಯೋತಿ, ಪೂರ್ಣಿಮಾ, ವಿನುತಾ, ಶಮಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net