

ಬೆಳ್ತಂಗಡಿ: ವೇಣೂರು ಎಸ್ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತರಬೇತಿ ಪೂರ್ಣಗೊಂಡ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಹಾಗೂ ರಕ್ಷಕರ ದಿನಾಚರಣೆ ಇತ್ತೀಚೆಗೆ ನಡೆಯಿತು.
ಎಸ್ಡಿಎಂ ಶಿಕ್ಷಣ ಸಂಸ್ಥೆ ಉಜಿರೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಅಧ್ಯಕ್ಷತೆ ವಹಿಸಿ ಪ್ರಮಾಣಪತ್ರ ವಿತರಿಸಿದರು. ಐಟಿಐ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ವೇಣೂರು ಪದ್ಮಾಂಬಾ ಸಮೂಹ ಸಂಸ್ಥೆಗಳ ಮಾಲೀಕ ಜಿನರಾಜ್ ಜೈನ್ ಮಾತನಾಡಿ ಎಲ್ಲ ಕೆಲಸಗಳನ್ನು ಪ್ರೀತಿಯಿಂದ ಮಾಡಿದಾಗ ಸಿಗುವ ಆತ್ಮತೃಪ್ತಿ ಎಲ್ಲಕ್ಕಿಂತಲೂ ಮಿಗಿಲು ಎಂದರು.
ಅದ್ವೈತ್ ಹುಂಡೈ ಬೆಂಗಳೂರು ಜನರಲ್ ಮ್ಯಾನೇಜರ್ ಆನಂದ್ ಕುಮಾರ್, ಅದ್ವೈತ್ ಹುಂಡೈನ ಅರುಣ್ ಕುಮಾರ್, ತರಬೇತಿ ಅಧಿಕಾರಿ ಶ್ರೀ ಪೀಟರ್ ಸಿಕ್ವೇರ ಉಪಸ್ಥಿತರಿದ್ದರು. ವಿಶೇಷವಾಗಿ ಸಾಧನೆಗೈದ ತರಬೇತುದಾರರಾದ ಪ್ರಕಾಶ್, ಕೌಶಿಕ್, ಅವಿಲ್ ಲೋಬೊ, ಶಿವಪ್ರಸಾದ್ ಹಾಗೂ ಅಂಕಿತಾ ಅವರನ್ನು ಗೌರವಿಸಲಾಯಿತು.
ಸಂಸ್ಥೆ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್.ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿಗಳಾದ ಜಾಕೋಬ್ ಟಿ.ವಿ.ವಂದಿಸಿ ಪದ್ಮಪ್ರಸಾದ್ ಬಸ್ತಿ ನಿರೂಪಿಸಿ, ಶ್ರೀಧರ ಡಿ.ಹಾಗೂ ಸತೀಶ್ ಸಹಕರಿಸಿದರು.