

ಮುಳ್ಳೇರಿಯ: ಯಕ್ಷಗಾನ ಕಲಾವಿದರೂ ಕೀರಿಕ್ಕಾಡು ಮಾಸ್ತರರ ಶಿಷ್ಯರೂ ಆಗಿದ್ದ ದೇಲಂಪಾಡಿ ಮಹಾಲಿಂಗ ಪಾಟಾಳಿ ಅವರ 18ನೇ ವರ್ಷದ ಸಂಸ್ಮರಣೆ ಆ.10ರಂದು ಸಂಜೆ 6ರಿಂದ ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.
ದೇಲಂಪಾಡಿ ಮಹಾಲಿಂಗ ಪಾಟಾಳಿ ಮತ್ತು ಸೀತಮ್ಮನವರ ಸ್ಮರಣಾರ್ಥವಾಗಿ ಕೊಡಮಾಡುವ ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ಸ್ಮತಿ ಪುರಸ್ಕಾರವನ್ನು ನಾಡಿನ ಹಿರಿಯ ವೈದ್ಯ, ಕಲಾವಿದ, ಸಾಹಿತಿ ಡಾ.ರಮಾನಂದ ಬನಾರಿಯವರಿಗೆ ಪ್ರದಾನ ಮಾಡಲಾಗುವುದು.
ಅಧ್ಯಕ್ಷತೆಯನ್ನು ಯಕ್ಷಗಾನ ಕಲಾವಿದ, ನಿವೃತ್ತ ಮುಖ್ಯಶಿಕ್ಷಕ ದೇಲಂಪಾಡಿ ರಾಮಣ್ಣ ಮಾಸ್ತರ್ ವಹಿಸುವರು. ಲೇಖಕ, ಕಲಾವಿದ ಮತ್ತು ಉಪನ್ಯಾಸಕ ನಾರಾಯಣ ತೋರಣಗಂಡಿ ಸಂಸ್ಮರಣಾ ಭಾಷಣ ಮಾಡುವರು. ಸಭಾ ಕಾರ್ಯಕ್ರಮದ ಬಳಿಕ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸೀತಾಪಹಾರ-ಜಟಾಯು ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.