

ಜನ್ನಾಡಿ: ಮೊಳವಳ್ಳಿ ಶಿವರಾಯರ ಊರಲ್ಲಿ ನಡೆಯುವ ಕುಂದಾಪುರ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಬಿದ್ಕಲ್ಕಟ್ಟೆಯಲ್ಲಿ ಸಮ್ಮೇಳನ ‘ತರ್ಕಣಿ-2024’ರ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡುದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ಪುತ್ರನ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.
ಆರ್ಥಿಕ ಸಮಿತಿ ಅಧ್ಯಕ್ಷ ಬಿ.ಅರುಣ ಕುಮಾರ ಹೆಗ್ಡೆ ಯಡಾಡಿ, ಸ್ವಾಗತ ಸಮಿತಿ ಅಧ್ಯಕ್ಷ ಮಹೇಶ ಹೆಗ್ಡೆ ಮೊಳವಳ್ಳಿ, ಕಾರ್ಯದರ್ಶಿ ರಾಘವೇಂದ್ರ ಅಡಿಗ ಬಿದ್ಕಲ್ಕಟ್ಟೆ, ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಕ್ಷತಾ ಗಿರೀಶ್, ಹೊಂಬಾಡಿ ಮಂಡಾಡಿ ಗ್ರಾಪಂ ಅಧ್ಯಕ್ಷೆ ಜಯಂತಿ, ಮೊಳವಳ್ಳಿ ಗ್ರಾಪಂ ಅಧ್ಯಕ್ಷ ಎಂ.ಚಂದ್ರಶೇಖರ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಬಿದ್ಕಲ್ಕಟ್ಟೆ ಕೆಪಿಎಸ್ ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ, ಮೆರವಣಿಗೆ ಸಮಿತಿ ಸಂಚಾಲಕ ದೀನಪಾಲ ಶೆಟ್ಟಿ, ಸ್ವಯಂಸೇವಕರ ಸಮಿತಿ ಸಂಚಾಲಕ ಮನೋಜ್ ಕುಮಾರ ಶೆಟ್ಟಿ, ಮಾಧ್ಯಮ ಪ್ರಚಾರ ಸಮಿತಿ ಸಂಚಾಲಕ ಚಂದ್ರಶೇಖರ ಶೆಟ್ಟಿ ಮಣಿಗೇರಿ, ಅಶೋಕ್ ಕುಮಾರ್ ಶೆಟ್ಟಿ ನಿಡ್ಲಾಡಿ, ಅತುಲ್ಕುಮಾರ ಶೆಟ್ಟಿ ಜನ್ನಾಡಿ, ರತ್ನಾಕರ ಶೆಟ್ಟಿ, ಚೈತ್ರಾ ಅಡಪ, ಕಿರಣ್ಕುಮಾರ್ ಜನ್ನಾಡಿ, ಸತೀಶ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಘಟಕ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಕರ್ಯಕ್ರಮ ನಿರೂಪಿಸಿದರು. ಮಹೇಶ ಹೆಗ್ಡೆ ಮೊಳವಳ್ಳಿ ಸ್ವಾಗತಿಸಿದರು.