

ಬೆಳ್ವೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡುಗೆಗಳನ್ನು ನೀಡಿ ಪ್ರೋತ್ಸಾಹಿಸಿದಾಗ ಉತ್ತಮ ಬೆಳವಣಿಗೆ ಕಾಣಲು ಸಾಧ್ಯ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಂಚಾರು ಅಂಡಾರಕಟ್ಟೆ ರಕ್ಷಿತಾ ಕ್ಯಾಶ್ಯೂ ಉದ್ಯಮಿ ಸುಧಾಕರ ಶೆಟ್ಟಿ ಶಿರಂಗೂರು ಹೇಳಿದರು.
ಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಎಂ.ಸತ್ಯನಾರಾಯಣ ಹೆಬ್ಬಾರ್ ಮರೂರು, ಸದಾಶಿವ ಶೆಟ್ಟಿ ಹಳ್ಳಿ, ಜಯರಾಮ ಶೆಟ್ಟಿ ತಾರಿಕಟ್ಟೆ, ಹಳ್ಳಿ ಶ್ರೀ ಶಾರದೋತ್ಸವ ಸಮಿತಿ ಸ್ಥಾಪಾಕಾಧ್ಯಕ್ಷ ಮುಕೇಶ್ ನ್ಯಾರಿ ಹಳ್ಳಿ, ಕೊಕ್ಕರ್ಣೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಭಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷೆ ಶೋಭಾ ವಸಂತ, ಮುಖ್ಯ ಶಿಕ್ಷಕ ರಾಮ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹ ಶಿಕ್ಷಕ ವೃಂದ, ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಮ ಸ್ವಾಗತಿಸಿದರು. ಸಹ ಶಿಕ್ಷಕಿ ಸುಮತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಜ್ಯೋತಿ ವಂದಿಸಿದರು.