ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಕಾರಿ: ವಿದ್ಯಾರ್ಥಿಮಿತ್ರ ಕೊಡುಗೆ ಕಾರ್ಯಕ್ರಮದಲ್ಲಿ ಹರೀಶ್ ಶೆಟ್ಟಿ ಚೇರ್ಕಾಡಿ ಅಭಿಮತ

vidyarthimitra
ಸರ್ಕಾರಿ ಪ್ರೌಢಶಾಲೆ ಕರ್ಜೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಕೊಡುಗೆ ಕಾರ್ಯಕ್ರಮ ಮಂಗಳವಾರ ಜರುಗಿತು
Published on

ಕೊಕ್ಕರ್ಣೆ: ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಹಲವು ದಾರಿಗಳಿವೆ. ಅದರಲ್ಲಿ ವಿಜಯವಾಣಿ ಪ್ರಕಟಿಸುತ್ತಿರುವ ವಿದ್ಯಾರ್ಥಿಮಿತ್ರ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣ. ಗ್ರಾಮೀಣ ಭಾಗದ ಮಕ್ಕಳು ಟ್ಯೂಷನ್, ಆನ್‌ಲೈನ್ ಕಲಿಕೆಗಳಿರದ ಸಂದರ್ಭ ವಿದ್ಯಾರ್ಥಿಮಿತ್ರ ಸಹಕಾರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ ಹೇಳಿದರು.

ಸರ್ಕಾರಿ ಪ್ರೌಢಶಾಲೆ ಕರ್ಜೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಕೊಡುಗೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಶ್ರಮದಾನದ ಮೂಲಕ ರಾಜ್ಯದಲ್ಲಿ ಹೆಸರು ವಾಸಿಯಾದ ಶೌರ್ಯ ತಂಡ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ನೀಡುತ್ತಿರುವುದು ಸಮಾಜಮುಖಿ ಕೆಲಸದ ಇನ್ನೊಂದು ಹೆಜ್ಜೆ ಎಂದರು.

ಶೌರ್ಯ ಘಟಕ ಚೇರ್ಕಾಡಿ ಮತ್ತು ದಾನಿ ಸಂತೋಷ್ ನಾಯಕ್ ಬೀದರ್ ಪ್ರಾಯೋಜಕತ್ವ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ರಘು ನಾಯ್ಕ, ಚೇರ್ಕಾಡಿ ವಲಯ ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಸತೀಶ್ ನಾಯಕ್, ಸದಸ್ಯರು, ಹಿರಿಯ ಶಿಕ್ಷಕಿ ಗಾಯತ್ರಿ, ಶಿಕ್ಷಕ ಜಗದೀಶ್, ಶಿಕ್ಷಕ ವೃಂದ, ಸೇವಾಪ್ರತಿನಿಧಿ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೇಲ್ವಿಚಾರಕಿ ಆಶಾಲತಾ ಸ್ವಾಗತಿಸಿ, ವರದಿಗಾರ ಅನಂತ ನಾಯಕ್ ಮುದ್ದೂರು ಪ್ರಸ್ತಾವನೆಗೈದು, ಶಿಕ್ಷಕಿ ರಮೀಲಾ ವಂದಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಹತ್ತು ಹಲವು ಕಾರ್ಯಕ್ರಮ ಸಮಾಜಮುಖಿಯಾಗಿವೆ. ಈ ಭಾಗಕ್ಕೆ ಶೌರ್ಯ ಘಟಕದ ಕೊಡುಗೆ ಅಪಾರ. ವಿದ್ಯಾರ್ಥಿಮಿತ್ರದ ಮೂಲಕ ಶಾಲೆಯ ಫಲಿತಾಂಶದಲ್ಲಿ ಉತ್ತಮ ಸಾಧನೆಗೆ ಸಹಕಾರಿಯಾಗುತ್ತದೆ.-ಜಗದೀಶ್, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕರ್ಜೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net