ಶೈಕ್ಷಣಿಕ ಪ್ರಗತಿಗೆ ಮಠಮಾನ್ಯಗಳ ಕೊಡುಗೆ ಅಪಾರ

ಕಾನಹೊಸಹಳ್ಳಿಯಲ್ಲಿ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಗೋಪುರ ಕಳಸಾರೋಹಣ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಪ್ರಶಾಂತಸಾಗರ ಸ್ವಾಮೀಜಿ, ಐಮುಡಿ ಶರಣಾರ್ಯರರು, ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಬಿ.ಶ್ರೀರಾಮುಲು ಇತರರಿದ್ದರು.
ಕಾನಹೊಸಹಳ್ಳಿಯಲ್ಲಿ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಗೋಪುರ ಕಳಸಾರೋಹಣ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಪ್ರಶಾಂತಸಾಗರ ಸ್ವಾಮೀಜಿ, ಐಮುಡಿ ಶರಣಾರ್ಯರರು, ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಬಿ.ಶ್ರೀರಾಮುಲು ಇತರರಿದ್ದರು.
Published on

ಕಾನಹೊಸಹಳ್ಳಿ: ಭೂಮಿ, ಗೋವು ಹಾಗೂ ಸ್ತ್ರೀಯರನ್ನು ಮಾತೆ ಎಂದು ಪೂಜಿಸುವ ದೇಶ ಭಾರತ. ಜತೆಗೆ ಧಾರ್ಮಿಕ, ಸಾಂಸ್ಕೃತಿಕ ಚಿಂತನೆ ಪಾಲಿಸುವ ನಾವುಗಳು ಶ್ರೇಷ್ಠ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಹೇಳಿದರು.

ಕಾನಹೊಸಹಳ್ಳಿಯಲ್ಲಿ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನೆ, ಗೋಪುರ ಕಳಸಾರೋಹಣ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.

ತಂದೆ-ತಾಯಿ, ಗುರು ಹಾಗೂ ಪಂಚಭೂತಗಳನ್ನು ದೇವರೆಂದು ಪೂಜಿಸುವ ಭಾರತದ ಸಂಸ್ಕೃತಿಯನ್ನು ಜಗತ್ತೇ ಕೊಂಡಾಡುತ್ತಿದೆ. ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕಿದೆ. ಸರ್ವ ಧರ್ಮದವರು ಭಾರತೀಯರೆಂಬ ಅಭಿಮಾನ ಹೊಂದಿರಲಿ. ಇಂಥ ನೆಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ. ಹಿಂದೆ ಹಿರಿಯರು ಮಾಡಿದ ಕಾರ್ಯಗಳು ಮೂಢನಂಬಿಕೆಯಲ್ಲ. ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣಗಳಿವೆ. ಸನಾತನ ಧರ್ಮವನ್ನು ಯಾರೂ ಟೀಕಿಸಬಾರದು. ಶೈಕ್ಷಣಿಕ ಪ್ರಗತಿಗೆ ಮಠಮಾನ್ಯಗಳ ಕೊಡುಗೆ ಅಪಾರ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆ ಸಂಸ್ಕಾರವನ್ನು ಕಲಿಸಬೇಕು ಎಂದು ತಿಳಿಸಿದರು.

ಕೂಡ್ಲಿಗಿ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯ ಮಾತನಾಡಿ, ಧರ್ಮದ ಮೂಲಕ ಶಾಂತಿ ಸ್ಥಾಪನೆಗೆ ಉಜ್ಜಿನಿ ಸದ್ಧರ್ಮ ಜಗದ್ಗುರುಗಳು ಶ್ರಮಿಸುತ್ತಿದ್ದಾರೆ. ಗ್ರಾಮಸ್ಥರ ಧಾರ್ಮಿಕ ಕಾರ್ಯ ಉತ್ತಮವಾಗಿದೆ ಎಂದರು.

ಶ್ರೀ ಶರಣಬಸವೇಶ್ವರ ದಾಸೋಹಮಠದ ಧರ್ಮಾಧಿಕಾರಿ ಐಮುಡಿ ಶರಣಾರ್ಯರರು, ಕೊಟ್ಟೂರು ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷ ಡಾ.ಸಿದ್ಧಲಿಂಗ ಶಿವಾಚಾರ್ಯ, ಮಾಜಿ ಸಚಿವ ಬಿ.ಶ್ರೀರಾಮುಲು, ಪ್ರಮುಖರಾದ ಈ.ವೀರಣ್ಣ, ಎಸ್.ಎಂ.ಗುರುಸಿದ್ದಯ್ಯ, ಕೆ.ಜಿ.ಕುಮಾರಗೌಡ, ಕೆ.ಜಿ.ನಾಗರಾಜ ಗೌಡ, ಎಚ್.ಜಿ.ಬಸವನಗೌಡ, ಎಚ್.ಜಿ.ಸಿದ್ದಲಿಂಗನಗೌಡ, ಎಂ.ಒ.ಮಂಜುನಾಥ ಸ್ವಾಮಿ, ಬಿ.ಬಸವರಾಜ, ಎಚ್.ಎಂ.ಬಿ.ಗುರುಮೂರ್ತಿ, ಎಚ್.ಕೆ.ವೆಂಕಟೇಶ್ವರ ರಾವ್, ಕೆ.ಸುಭಾಶ್‌ಚಂದ್ರ, ಎಚ್.ಕೆ.ರಾಜಣ್ಣ, ಜಿ.ಶಿವಮೂರ್ತಿ, ಪರಮೇಶ್‌ಗೌಡ, ಮಹಾಂತೇಶಗೌಡ, ಕುಂಬಳಗುಂಟೆ ಜಗದೀಶ, ಎಚ್.ಕೆ.ರವಿ, ಎಂ.ಸಿದ್ದಣ್ಣ, ಫೋಟೋ ಮಂಜುನಾಥ, ಜಿ.ವೀರಣ್ಣ ಇತರರಿದ್ದರು.

ಅಡ್ಡಪಲ್ಲಕ್ಕಿ ಉತ್ಸವ: ಪೂರ್ಣಕುಂಭ ಹೊತ್ತ ಮಹಿಳೆಯರು, ನಂದಿಧ್ವಜ, ಸಮಾಳ, ಹಲಗೆ ಸೇರಿ ವಿವಿಧ ಜಾನಪದ ವಾದ್ಯಗಳೊಂದಿಗೆ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ನಂತರ ದೇವಸ್ಥಾನದ ಗೋಪುರ ಕಳಸಾರೋಹಣ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net