

ಹೆಬ್ರಿ: ನಾವೆಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು. ಸಮಾಜದ ಹಿತಕ್ಕೋಸ್ಕರ ನಿರಂತರವಾಗಿ ಯಾರು ಒಳಿತು ಮಾಡಲು ಪ್ರಯತ್ನಿಸುತ್ತಾರೋ ಅವರು ಪಡೆದ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್ ಹಾಗೂ ಅವರ ಮನೆಯವರ ತ್ಯಾಗದಿಂದ ಸಂಸ್ಥೆ ಇಷ್ಟು ಉತ್ತಮವಾಗಿ ಮೂಡಿ ಬರಲು ಕಾರಣ ಎಂದು ಅದಮಾರು ಮಠದ ನಿಕಟವರ್ತಿ ಹಾಗೂ ಧಾರ್ಮಿಕ ಶಿಕ್ಷಣ ಪ್ರವಚನಕಾರ ಓಂ ಪ್ರಕಾಶ್ ಭಟ್ ಹೇಳಿದರು.
ಶಾಂತಿನಿಕೇತನದಿಂದ ನಡೆದ ನವರಾತ್ರಿ ವಿಶೇಷ ಧಾರ್ಮಿಕ ಉಪನ್ಯಾಸ ಮತ್ತು ಅದಮಾರು ಮಠದ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಕೃಷ್ಣನ ಜಪ ಮಾಡುವುದರಿಂದ ಎಲ್ಲರಿಗೂ ಒಳಿತಾಗುತ್ತದೆ. ಮಕ್ಕಳು ಪಾಲಕರನ್ನು ಗೌರವಿಸಬೇಕು. ನಿರಂತರ ದೇವರ ಜ್ಞಾನದಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅದಮಾರು ಮಠದ ಶ್ರೀಗಳು ನೀಡಿರುವ ಕೃಷ್ಣ ಜಪ ಮಾಲೆ, ಪ್ರಸಾದ ವಿತರಣೆ ನಡೆಯಿತು. ಶಾಂತಿನಿಕೇತನ ಸಂಸ್ಥಾಪಕ ರಾಜೇಶ್, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ, ಕೆ.ಗಣೇಶ್, ರಾಜೇಶ್ರೀ, ನಾಗರಾಜ್, ಕಲಾವತಿ, ಪ್ರಸನ್ನ, ರಾಘವೇಂದ್ರ, ವಿದ್ಯಾರ್ಥಿ ಘಟಕದ ನಿತಿನ್, ಸೌಜನ್ಯಾ, ಚೈತನ್ಯ, ಚೇತನ್ ಉಪಸ್ಥಿತರಿದ್ದರು.
ಗ್ರಾಮೀಣ ಭಾಗದಲ್ಲಿ ಕಟ್ಟಿದ ಸಂಸ್ಥೆಗೆ ಅದಮಾರು ಮಠದ ಸ್ವಾಮೀಜಿ ನಿರಂತರವಾಗಿ ಆಶೀರ್ವಾದ ಮಾಡಿದ ಪುಣ್ಯದ ಫಲವಾಗಿ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ. -ರಾಜೇಶ್ , ಸಂಸ್ಥಾಪಕ ಶಾಂತಿನಿಕೇತನ
-ರಾಜೇಶ್ , ಸಂಸ್ಥಾಪಕ ಶಾಂತಿನಿಕೇತನ