ಸಂಘಟನೆಯಿಂದ ನಿರಂತರ ಸಾಮಾಜಿಕ ಕಾರ್ಯ

gele
Published on

ಕೋಟ: ಸಂಘಟನೆಗಳ ನಿರಂತರ ಸಮಾಜಿಕ ಕಾರ್ಯ ಅಸಾಮಾನ್ಯ. ಈ ನಿಟ್ಟಿನಲ್ಲಿ ಗೆಳೆಯರ ಬಳಗದ ಸಾಮಾಜಮುಖಿ ಕಾರ್ಯಕ್ರಮ ಮನೆಮನ ತಲುಪಿದೆ ಎಂದು ಮುಂಬೈ ಒಎನ್‌ಜಿಸಿ ಚೀಫ್ ನಿವೃತ್ತ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಹೇಳಿದರು

ಕಾರ್ಕಡ ಶಾಲಾ ವಠಾರದಲ್ಲಿ ಶನಿವಾರ ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ 37ನೇ ವಾರ್ಷಿಕೋತ್ಸವ, ಸನ್ಮಾನ, ದತ್ತಿನಿಧಿ ವಿತರಣೆ, ಪ್ರತಿಭಾ ಪುರಸ್ಕಾರ, ಅಶಕ್ತರ ಮತ್ತು ವಿಕಲಚೇತನರ ಸಹಾಯ ನಿಧಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಎಂಜಿಎಂ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಬಿಎಸ್‌ಎನ್‌ಎಲ್ ನಿವೃತ್ತ ಡಿಜಿಎಂ ಕೆ.ಜಿ.ಸೂರ್ಯನಾರಾಯಣ, ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ವಿವೇಕ ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಸುಧಾಕರ ಪಿ., ನಿವೃತ್ತ ಅಂಚೆ ಪಾಲಕ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ನ್ಯೂಕಾರ್ಕಡ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು. ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ ಶೀನ ಕೆ. ವರದಿ ವಾಚಿದರು. ಸದಸ್ಯರಾದ ನಾಗರಾಜ್ ಉಪಾಧ್ಯಾ, ಶೇಖರ್, ಕೆ.ಶ್ರೀಕಾಂತ್ ಐತಾಳ ಸನ್ಮಾನಪತ್ರ ವಾಚಿಸಿದರು. ಕೆ.ಚಂದ್ರಕಾಂತ ನಾಯರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ಅಭಿನಂದನೆ

ಯಕ್ಷಗುರು ಕೃಷ್ಣಮೂರ್ತಿ ಉರಾಳ, ಎಂ.ಜಯರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೋಟ ಅಮೃತೇಶ್ವರಿ ದೇಗುಲ ಆಡಳಿತ ಮಂಡಳಿ ಸದಸ್ಯ ಗಣೇಶ್ ನೆಲ್ಲಿಬೆಟ್ಟು, ಕೋಟ ಸಹಕಾರಿ ವ್ಯವಸಾಯಿಕ ಸಂಘ ನಿರ್ದೇಶಕರಾದ ವಸಂತಿ ಅಚ್ಯುತ್ ಪೂಜಾರಿ, ಚಂದ್ರಪೂಜಾರಿ ಪಿ. ಅವರನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಸಾಧಕಿ ಶರ್ಮದಾ, ಶೌರ್ಯ ಪ್ರಶಸ್ತಿ ಪುರಸ್ಕೃತ ಧೀರಜ್ ಐತಾಳ್, ಕರಾಟೆ ಸಾಧಕಿ ಸಂಹಿತ ಆಚಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗೆಳೆಯರ ಬಳಗ ಸ್ಥಾಪಕ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅವರಿಗೆ ಬಳಗದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net