

ಬಾದಾಮಿ: ಮನುಷ್ಯನಿಗೆ ಅಸಾಧಾರಣ ಮತ್ತು ಅಪರಿಮಿತ ಸಾಮರ್ಥ್ಯವಿದ್ದು, ಅದನ್ನು ಒರೆಗಲ್ಲಿಗೆ ಹಚ್ಚಿದರೆ ದೊಡ್ಡ ಸಾಧನೆ ಮಾಡಬಹುದು.
ದ್ಯಾರ್ಥಿಗಳು ಸಾಮರ್ಥ್ಯದ ಸದ್ಬಳಕೆ ಮಾಡಿಕೊಂಡರೆ ಭವಿಷ್ಯದ ಗುರಿ ಮುಟ್ಟಲು ಸಾಧ್ಯ ಎಂದು ವಿಶ್ವ ದಾಖಲೆಯ ಅಂಧ ಸ್ಕೆಟಿಂಗ್ ಕ್ರೀಡಾಪಟು ನಾನು ಪಾಟೀಲ ಹೇಳಿದರು.
ಪಟ್ಟಣದ ಎಸ್ವಿಪಿ ಸಂಸ್ಥೆಯ ಎಸ್.ಬಿ.ಮಮದಾಪೂರ ಪದವಿ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಸಮಾರೋಪ, ದೀಪದಾನ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: ಅಧಿಕಾರಿ ಭರವಸೆ ನಂತರ ಹೋರಾಟ ಹಿಂದಕ್ಕೆ
ಬದುಕಿನಲ್ಲಿ ಅಡೆತಡೆಗಳು ಬರುತ್ತವೆ. ಆದರೆ ಈಗ ಶಿಕ್ಷಣ ಪಡೆಯಲು ಯಾವುದೇ ತೊಂದರೆ ಇಲ್ಲ. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಕೊಡುತ್ತಿವೆ.
ಆದರೆ ಹೊಸ ಪೀಳಿಗೆಯಿಂದ ಓದುವಿಕೆ ಕಡಿಮೆಯಾಗತೊಡಗಿದೆ. ಮೊಬೈಲ್ ಗೀಳು ಹೆಚ್ಚಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಶ್ರೀ ಮದ್ವೀರಶೈವ ಸಂಸ್ಥೆಯ ಶಿವಯೋಗಮಂದಿರದ ಉಪಾಧ್ಯಕ್ಷ- ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.
ದಾನಿಗಳು, ಸಾಧಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೀರಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು. ಜೆ.ಎಸ್.ಮಮದಾಪೂರ, ಪಂಪಣ್ಣ ಕಾಚಟ್ಟಿ, ವಿ.ಎನ್.ನಿಲೂಗಲ್, ರಾಜಶೇಖರ ಬಸುಪಟ್ಟದ, ವಿದ್ಯಾರ್ಥಿಗಳ ಪ್ರತಿನಿಧಿ ಕುಮಾರೇಶ ಕಾತರಕಿ, ಪ್ರಾಚಾರ್ಯ ಆರ್.ಎಸ್.ಮೂಲಿಮನಿ ಇದ್ದರು.