

ಬ್ರಹ್ಮಾವರ: ಯೇಸುಕ್ರಿಸ್ತರು ಭೂಮಿಯಲ್ಲಿ ಮಾನವರಾಗಿ ಜನಿಸಿ ಅಶಕ್ತರು, ನೊವುಂಡವರ ಏಳಿಗೆಗಾಗಿ ಜೀವನದ ಕೊನೆಯ ವರೆಗೂ ಶ್ರಮಿಸಿದವರು. ಕ್ರಿಸ್ಮಸ್ ಹಬ್ಬ ನಮ್ಮಲ್ಲಿ ಇರುವುದನ್ನು ಪರರೊಂದಿಗೆ ಹಂಚಿಕೊಂಡು ಬಾಳುವ ಸಂದೇಶವನ್ನು ಸಾರುತ್ತದೆ ಎಂದು ಕೆಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಕರ್ನೆಲೀಯೋ ಹೇಳಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಬ್ರಹ್ಮಾವರ ಸಮೀಪದ ಅಪ್ಪ ಅಮ್ಮ ಅನಾಥಾಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘಟನೆ ವತಿಯಿಂದ ಆಶ್ರಮ ವಾಸಿಗಳ ಊಟದ ಖರ್ಚಿಗೆ 20000 ರೂ.ಧನ ಸಹಾಯ ಹಸ್ತಾಂತರಿಸಲಾಯಿತು. ಆಚರಣೆ ಪ್ರಯುಕ್ತ ಆಶ್ರಮವಾಸಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ನಿಯೋಜಿತ ಅಧ್ಯಕ್ಷ ರೋನಾಲ್ಡ್ ಡಿ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷ ವಲೇರಿಯನ್ ಫರ್ನಾಂಡಿಸ್, ಪದಾಧಿಕಾರಿ ಶಾಂತಿ ಪಿರೇರಾ, ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಕ್ವಾಡ್ರಸ್, ಬ್ರಹ್ಮಾವರ ಘಟಕಾಧ್ಯಕ್ಷ ಜೊಯೇಲ್ ಡಿ ಆಲ್ಮೇಡಾ, ಕೋಶಾಧಿಕಾರಿ ಸ್ಟಾೃನಿ ಡಿಸೋಜ ಉಪಸ್ಥಿತರಿದ್ದರು.