ನಿರಂತರ ಹಿಂದುಗಳ ಮೇಲೆ ದಾಳಿ

karkala protest
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದುಗಳ ನರಮೇಧ, ಜಿಹಾದಿ ಭಯೋತ್ಪಾದನಾ ಕೃತ್ಯ ಖಂಡಿಸಿ ಬಸ್ ನಿಲ್ದಾಣ ಬಳಿಯಲ್ಲಿ ಪ್ರತಿಭಟನೆ ನಡೆಯಿತು.
Published on

ಕಾರ್ಕಳ: ಈ ದೇಶವನ್ನು ಇಸ್ಲಾಂ ರಾಷ್ಟ್ರ ಮಾಡಬೇಕೆನ್ನುವ ಹೊಂಚು ನಡೆಯುತ್ತಿದೆ. ನಮ್ಮ ಮುಂದಿನ ಪೀಳಿಗೆ ಹಿಂದುವಾಗಿ ಉಳಿಯಬೇಕಾದರೆ ನಾವೆಲ್ಲರೂ ಜಾಗೃತರಾಗಬೇಕಾಗಿದೆ. ನಿರಂತರವಾಗಿ ಹಿಂದುಗಳ ಮೇಲೆ ದಾಳಿಯಾಗುತ್ತಿದೆ. ಸ್ವಾಭಿಮಾನಿ ಹಿಂದು ಸಮಾಜ ನಿರ್ಮಾಣವಾದರೆ ಇದ್ದಕ್ಕೆ ತಕ್ಕ ಉತ್ತರ ನೀಡಲು ಸಾಧ್ಯ ಎಂದು ಹಿಂದು ಮುಖಂಡ ಸುನೀಲ್ ಕೆ.ಆರ್. ಹೇಳಿದರು.

ಕಾರ್ಕಳ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದುಗಳ ನರಮೇಧ, ಜಿಹಾದಿ ಭಯೋತ್ಪಾದನಾ ಕೃತ್ಯ ಖಂಡಿಸಿ ಬಸ್ ನಿಲ್ದಾಣ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.

ಹಿಂದು ಮುಖಂಡರಾದ ನವೀನ್ ನಾಯಕ್, ಅವಿನಾಶ್ ಶೆಟ್ಟಿ, ಚೇತನ್, ಹಿಂದು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net