ಸಮುದಾಯದ ಪರಂಪರೆ ಮುಂದುವರಿಕೆ: ಪ್ರವಿಣ್​ ಕುಮಾರ್​ ಆಶಯ

Btw_community
Published on

ಬಂಟ್ವಾಳ: ಮರಾಟಿಗರು ಅನುಸರಿಸಿಕೊಂಡು ಬಂದ ಸಂಸ್ಕಾರ, ಸಂಸತಿ, ಪೂಜಾ ವಿಧಿವಿಧಾನಗಳನ್ನು, ಆಚಾರ ವಿಚಾರಗಳನ್ನು ಪಾಲಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ಅತ್ಯುತ್ತಮ ಶಿಕ್ಷಣವನ್ನು ಪಡೆದು, ಒಗ್ಗಟ್ಟಿನ ಮೂಲಕ ಮರಾಟಿ ಸಮಾಜವನ್ನು ಇನ್ನಷ್ಟು ಬಲಪಡಿಸಬೇಕು. ಎಲ್ಲ ವರ್ಗದ ಜನರೊಂದಿಗೆ ಆತ್ಮೀಯವಾಗಿ ಬೆರೆತು ಬಾಳಿ ನಮ್ಮ ಸಮಾಜದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಪ್ರವಿಣ್​ ಕುಮಾರ್​ ಮುಗುಳಿ ನೆಟ್ಲ ಹೇಳಿದರು.

ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂ ವತಿಯಿಂದ ನಡೆದ ಶ್ರೀ ಮಹಮ್ಮಾಯಿ ದೇವಿ ಅಮ್ಮನವರ ಸಾಮೂಹಿಕ ಗೋಂದೋಳು ಪೂಜೆ ಹಾಗೂ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂದ ಅಧ್ಯಕ್ಷ ನಾರಾಯಣ ನಾಯ್ಕ್​ ಪೆರ್ನೆ ಮಾತನಾಡಿ, ಸಮಾಜದ ಸರ್ವರಿಗೂ ಗೌರವ ಕೊಟ್ಟು ಶಿಸ್ತು , ಸಹಬಾಳ್ವೆ, ಒಗ್ಗಟ್ಟು ಮತ್ತು ಆತ್ಮೀಯತೆಯಿಂದ ಬಾಳಬೇಕು. ಉತ್ತಮ ಸಮಾಜ ನಿರ್ಮಾಣದ ಕನಸು ನಮ್ಮದಾಗಬೇಕು ಎಂದರು.

ಕಾರ್ಪೊರೇಟ್​ ಅಫೇರ್ಸ್​ ಮಿನಿಸ್ಟ್ರಿ ಪ್ರಾದೇಶಿಕ ನಿರ್ದೇಶಕ ಬಿ.ಎನ್​. ಹರೀಶ್​ ಮತ್ತು ಕಾರ್ಪೊರೇಟ್​ ಅಫೇರ್ಸ್​ ಮಿನಿಸ್ಟ್ರಿ ಲೋಕೋ ಪೈಲಟ್​ ವನಿತಾಶ್ರೀ ಎಂ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸಾಧಕರನು ್ನಗೌರವಿಸಲಾಯಿತು. ಸಂದ ಪ್ರಧಾನ ಕಾರ್ಯದರ್ಶಿ ವಿಠಲ್​ ನಾಯ್ಕ್​ ನೆಲ್ಲಿ ಸ್ವಾಗತಿಸಿದರು. ತಿಮ್ಮಪ್ಪ ನಾಯ್ಕ್​ ಕುದ್ದುಪದವು ಮತ್ತು ಬಾಲಕೃಷ್ಣ ನಾಯ್ಕ ಕೆ. ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net