ಅಧಿಕ ಶ್ರಾವಣ ಮಾಸದ ಅಂಗವಾಗಿ ನಿರಂತರ ಭಜನೆ

Bhajan-Mandali
Published on

ಕಾರವಾರ: ನಗರದ ಶ್ರೀರಾಘವೇಂದ್ರ ಭಜನಾ ಮಂಡಳಿಯ ಸದಸ್ಯರು, ಅಧಿಕ ಶ್ರಾವಣ ಮಾಸದ ಪ್ರಯುಕ್ತ, ಇಲ್ಲಿನ ಶ್ರೀ ರಾಘವೇಂದ್ರ ಮಠದಲ್ಲಿ 30 ದಿನಗಳ ಕಾಲ ನಿರಂತರ ಭಜನಾ ಕಾರ್ಯಕ್ರಮವನ್ನು ನಡೆಸಿದರು.

ಪ್ರತಿ ದಿನ ಶ್ರೀಗಣೇಶ, ಶ್ರೀ ರಾಘವೇಂದ್ರ, ಶ್ರೀದೇವಿ , ಶ್ರೀ ಆಂಜನೇಯ ಮತ್ತು ಶ್ರೀ ಮಹಾದೇವರ ಸ್ತುತಿ ಗಳೊಂದಿಗೆ ಪ್ರಾರಂಭಿಸಿ, ಪುರಂದರ ದಾಸರ 33 ಭಜನೆಗಳನ್ನು ಹಾಡುವುದರೊಂದಿಗೆ, 33 ದೀಪಗಳ ಆರತಿ ಮತ್ತು 33 ಹೂಗಳಿಂದ ಅರ್ಚನೆ ಯನ್ನು ಮಾಡಿ ಕೃತಾರ್ಥರಾದರು.

ಅಲ್ಲದೇ ಗೋಕರ್ಣದ ವೆಂಕಟೇಶ್ವರ ದೇವಸ್ಥಾನ, ಬಾಡದ ಮಹಾ ದೇವಸ್ಥಾನ, ಗೌರಿಶಂಕರ ದೇವಸ್ಥಾನ ಮತ್ತು ಮುರಳೀಧರ ಮಠದಲ್ಲೂ ಒಂದೊಂದು ದಿನ ಭಜನೆ ಮಾಡಿದರು. ಆರಾಧನಾ ಸಾಂಸ್ಕೃತಿಕ ಸಂಘದ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net