More

    ನೌಕಾನೆಲೆಯಿಂದ ಅಕ್ರಮ ಗೋ ಸಾಗಣೆ ..?

    ಕಾರವಾರ: ಸೀಬರ್ಡ್ ನೌಕಾನೆಲೆಯಿಂದ ಗೋವುಗಳನ್ನು ಸಾಗಿಸುತ್ತಿದ್ದ ವಿಚಾರ ಈಗ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
    ಕಲಬುರಗಿಯ ಮಠವೊಂದರ‌ ಗೋಶಾಲೆಯ ದಾಖಲೆ ಇಟ್ಟುಕೊಂಡು ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 18 ಗೋವುಗಳನ್ನು ರಕ್ಷಿಸಿ, ಸ್ಥಳೀಯರು ಶನಿವಾರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
    ಕಲಬುರಗಿಯ ಸಾಧಿಕ ಅಲಿ ಬಶೀರ್ ಅಹ್ಮದ್ ದೇಶಮುಖ, ಮಹ್ಮದ ಅಬ್ದುಲ್ ನದಿ, ಶೇಖ ಮಹ್ಮದ್ ಇಸ್ಮಾಯಿಲ್ ಮಹ್ಮದ್ ಮಂಜೂರ ಇಲಾಹಿ, ಧಾರವಾಡದ ಸಾಜೀದ ಅಲಿ ನದಾಫ ಮೊಹ್ಮದ ಸಾಹೇಬ್ , ಹುಬ್ಬಳ್ಳಿಯ ಅಲ್ಲಾಭಕ್ಷ ತಂದೆ ವಹೀದಸಾಬ್ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸೈಲ್ ಪ್ರಶ್ನೆ:
    ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಸತೀಶ ಸೈಲ್, ರಾಜ್ಯ ಸರ್ಕಾರ ರೂಪಿಸಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಕೇಂದ್ರ ಸರ್ಕಾರದ ರಕ್ಷಣಾ ಮಂತ್ರಾಲಯದ ನೇರ ಸುಪರ್ಧಿ ಯಲ್ಲಿರುವ ಕಾರವಾರ ನೌಕಾನೆಲೆ ಅಧಿಕಾರಿಗಳ ಕುಮ್ಮಕ್ಕಿನಿಂದ ಗೋ ಕಳ್ಳ ಸಾಗಣೆ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

    ಇದನ್ನೂ ಓದಿ:ಯುವತಿಗೆ ನಿಂದಿಸಿದ್ದ ಆರೋಪಿಯ ಬಂಧನ

    ಗೋ ಸಾಗಣೆಗೆ ಅವರು ಯಾವುದೇ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆದಿಲ್ಲ. ಅಷ್ಟಕ್ಕೂ ಈ ಜಾನುವಾರುಗಳನ್ನು
    ದೂರದ ಕಲಬುರಗಿಗೆ ಸಾಗಾಟ ಮಾಡುವುದಾದರೂ ಏತಕ್ಕಾಗಿ ಎಂಬುದು ಇಲ್ಲಿ ಪ್ರಸ್ನಿಸಬೇಕಾದ ವಿಷಯ. ಕಲಬುರಗಿಯ ಯಾವುದಾದರೂ ಗೋ ಶಾಲೆಗೆ
    ಕಳುಸುವುದಾದರೆ ಅಲ್ಲಿಯ ಗೋ ಶಾಲೆಗಳ ಯಾವುದಾದರೂ ಪತ್ರವ್ಯವಹಾರ ನೌಕಾನೆಲೆ ಅಧಿಕಾರಿಗಳು ಪಡೆದಿರುವರೇ ಎಂಬದನ್ನು ಕೂಡಾ ತನಿಖೆಗೆ ಒಳಪಡಿಸಬೇಕು.ಹೀಗೆ ಒಂದು ವೇಳೆ ಗೋ ಶಾಲೆ ಗಳಿಗೆಯೇ ಸಾಗಾಟ ಮಾಡುವುದಾದರೆ, ಉತ್ತರ ಕನ್ನಡ ಮತ್ತು ನೆರೆ ಜಿಲ್ಲೆಯಲ್ಲಿರುವ ಅಸಂಖ್ಯಾತ ಗೋ ಶಾಲೆ ಗಳನ್ನು ಬಿಟ್ಟು ದೂರದ ಕಲಬುರ್ಗಿಗೆ ಕಳುಸುವುದಾದರೂ ಏತಕ್ಕಾಗಿ ಎಂದು ಸೈಲ್ ಪ್ರಸ್ನಿಸಿದ್ದಾರೆ.
    ಅಷ್ಟಾಗಿಯೂ ಈ ಜಾನುವಾರುಗಳು ನಿರ್ದಿಷ್ಟ ಸ್ಥಳಕ್ಕೆ ತಲುಪುವ ಸಾದ್ಯತೆ ಕೂಡಾ ಅತಿ ಕಡಿಮೆ,ಯಾಕೆಂದರೆ ಈ ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸುವ ಪ್ರಯತ್ನ ಆಗಿರಬಾರ ಬಾರದೇಕೆ ಎಂದು ಜನಸಾಮಾನ್ಯರು ಅಭಿಪ್ರಾಯ ಪಡುತ್ತಿದ್ದಾರೆ.
    ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.
    ಈ ವಿಷಯದ ಗಂಭೀರತೆಯನ್ನು ದೇಶದ ರಕ್ಷಣಾ ಮಂತ್ರಿ, ಮುಖ್ಯ ಮಂತ್ರಿ, ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಶಾಸಕ ಸತೀಶ ಕೃಷ್ಣ ಸೈಲ್ ತಿಳಿಸಿದ್ದಾರೆ.
    ನೌಕಾನೆಲೆ‌ ಸ್ಪಷ್ಟನೆ:
    ಈ ಕುರಿತು ಭಾರತೀಯ ನೌಕಾಸೇನೆಯ ಕರ್ನಾಟಕ ವಲಯದ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಆಕಾಶ ದುಬೆ, ನೌಕಾಸೇನೆಯ ವ್ಯಾಪ್ತಿಯ ಒಳಹೆ ಸಾಕಷ್ಟು ಜಾನುವಾರುಗಳು ಬರುತ್ತವೆ. ಆದರೆ, ಅವುಗಳ ರಕ್ಷಣೆ ಮಾಡಲು ಕಾರವಾರದಲ್ಲಿ ಪಶು ಸಂಗೋಪನಾ ಇಲಾಖೆ ಸಮರ್ಪಕವಾಗಿಲ್ಲ. ಇದರಿಂದ‌ ಗೋವುಗಳನ್ನು ಹೊರಗೆ ಸಾಗಿಸಲು ಗೋ ಶಾಲೆಯೊಂದಕ್ಕೆ ತಿಳಿಸಲಾಗಿದೆ. ಅದಕ್ಕೆ ಬೇಕಾದ ಅಗತ್ಯ ಅನುಮತಿಗಳನ್ನು ಪಡೆಯುವುದು ಸಂಬಂಧಪಟ್ಟ ಗೋ ಶಾಲೆಯ ಪ್ರತಿನಿಧಿಯ ಜವಾಬ್ದಾರಿಯಾಗಿದೆ. ಸಾಗಣೆಗೆ ಪರವಾನಗಿ ಪಡೆಯುವುದಕ್ಕೂ, ನಮಗೂ ಸಂಬಂಧವಿಲ್ಲ. ಈ ಸಂಬಂಧ ಯಾವುದೇ ತನಿಖೆಗೆ ನೌಕಾಸೇನೆ ಸ್ಥಳೀಯ ಪೊಲೀಸರಿಗೆ ಸಹಕಾರ ನೀಡಲಿದೆ ಎಂದಿದ್ದಾರೆ.
    ವಾಹನ ಹೋಗಿದ್ದು ಹೇಗೆ..?
    ಸಾರ್ವಜನಿಕರ ಯಾವುದೇ ವಾಹನವನ್ನು ನೌಕಾನೆಲೆಯ ವ್ಯಾಪ್ತಿಯ ಒಳಗೆ ಬಿಡುವುದಿಲ್ಲ ಆದರೆ, ವಾಹನ ಒಳ ಹೋಗಿದ್ದು ಹೇಗೆ ಎಂದು‌ ಶಿವಸೇನಾ ಜಿಲ್ಲಾಧ್ಯಕ್ಷ ರಾಜೇಶ ನಾಯ್ಕ ಪ್ರಶ್ನಿಸಿದ್ದಾರೆ.

    ಮೊದಲೂ ಹೋಗಿವೆ
    ಈ ಮೊದಲೂ ಲಾರಿಗಳಲ್ಲಿ ಜಾನುವಾರುಗಳ ಸಾಗಣೆ ಅಕ್ರಮವಾಗಿ ನಡೆದಿತ್ತು. ನಾವು ಈಗ ಕಾದು ನಿಂತು ಅವುಗಳನ್ನು ಹಿಡಿದಿದ್ದೇವೆ ಎಂದು ಚೆಂಡಿಯಾದ ದೀಪಕ ನಾಯ್ಕ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts