ಯುವತಿಗೆ ನಿಂದಿಸಿದ್ದ ಆರೋಪಿಯ ಬಂಧನ

Published on

ಬೆಂಗಳೂರು: ಬುರ್ಖಾ ಧರಿಸಿದ್ದ ಯುವತಿಗೆ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಆರೋಪಿಯನ್ನು ಪೂರ್ವ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ಜಾಕೀರ್ ಅಹಮದ್(೨೨) ಬಂಧಿತ ಆರೋಪಿ.
ಅನ್ಯ ಧರ್ಮದ ಹುಡುಗನ ಜತೆ ಯುವತಿ ಹೋಗುತ್ತಿದ್ದಕ್ಕೆ ಆರೋಪಿಯು ನಿಂದಿಸಿ ವಿಡಿಯೋ ಮಾಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net