ಸಿದ್ದಾಪುರದಲ್ಲಿ ಮುಂದುವರಿದ ಗಾಳೆ-ಮಳೆ ಅಬ್ಬರ

25sdp3- RAIN
Published on

ಸಿದ್ದಾಪುರ: ತಾಲೂಕಿನಲ್ಲಿ ಮುಂದುವರಿದ ಮಳೆ- ಗಾಳಿಯಿಂದಾಗಿ ತಾಲೂಕಿನ ಹಲವೆಡೆ ಮನೆ, ಅಡಕೆ ತೋಟದ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದೆ.
ತಾಲೂಕಿನ ಸಣ್ಣಮನೆಯ ವಿಶ್ವನಾಥ ಗಣಪತಿ ಹೆಗಡೆ ಅವರ ಮನೆಯ ಮೇಲೆ ಮರ ಬಿದ್ದಿದೆ. ಸಿದ್ದಾಪುರದ ಹೊಸುರು ಎಲ್.ಬಿ.ನಗರದ ಲಕ್ಷ್ಮೀ ವೆಂಕಟೇಶ ಅಂಬಿಗ ಅವರ ಮನೆಯ ಮಣ್ಣಿನ ಗೋಡೆ ಕುಸಿದಿದೆ. ಹೆಗ್ಗರಣಿಯ ಅಬ್ದುಲ್ ರೆಹಮಾನ್ ಸಾಬ ಅವರ ಮನೆ ಮೇಲೆ ಮರ ಬಿದ್ದಿದೆ.

ಗಾಳಮಾಂವನ ದ್ಯಾವಾ ಪುಟ್ಟ ನಾಯ್ಕ ಅವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಹೊನ್ನೆಹದ್ದದ ಮಂಜುನಾಥ ವೆಂಕಟರಮಣ ಹೆಗಡೆ ಅವರ ಕೊಟ್ಟಿಗೆಯ ಮೇಲೆ ತೆಂಗಿನಮರ ಹಾಗೂ ಹಂಗಾರಖಂಡದ ಅಣ್ಣಪ್ಪ ಗಣಪ ನಾಯ್ಕ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಭಂಡಾರಿಕೇರಿ ಗ್ರಾಮದ ಕಂಚೀಮನೆ ಸಾವಿತ್ರಿ ನಾರಾಯಣ ಹೆಗಡೆ ಅವರ ಅಡಕೆ ತೋಟದ ಮೇಲೆ ಕಾಡು ಜಾತಿಯ ಮರ ಬಿದ್ದು 50ಕ್ಕೂ ಹೆಚ್ಚು ಅಡಕೆ ಮರ, 15ಕ್ಕೂ ಹೆಚ್ಚು ಅಡಕೆ ಗಿಡ ನಾಶವಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ.
ನಿರಂತರ ಗಾಳಿ- ಮಳೆಯಿಂದಾಗಿ ತಾಲೂಕಿನಾದ್ಯಂತ ವಿದ್ಯುತ ಕಣ್ಣ್ಣಾಮುಚ್ಚಾಲೆ ಜೋರಾಗಿದೆ. ಇದರಿಂದ ಗ್ರಾಹಕರು ಕಿರಿ ಕಿರಿ ಅನುಭವಿಸುವಂತಾಗಿದೆ. ವಿದ್ಯುತ್ ತಂತಿಯ ಮೇಲೆ ಹಾಗೂ ಕಂಬದ ಮೇಲೆ ಮರ ಬೀಳುತ್ತಿರುವುದರಿಂದ ಹೆಸ್ಕಾಂಗೆ ಅಪಾರ ನಷ್ಟ ಉಂಟಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net