ಚರಂಡಿಗೆ ಬಿದ್ದ ಕಂಟೈನರ್

palti
Published on

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಎಂಬಲ್ಲಿ ಕಂಟೈನರ್ ಹೆದ್ದಾರಿ ಬದಿ ಚರಂಡಿಗೆ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.

ತಂಪು ಪಾನೀಯವನ್ನು ಸಾಗಿಸುತ್ತಿದ್ದ ಕಂಟೈನರ್ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯ ಚರಂಡಿಯತ್ತ ಸಾಗಿದೆ. ಇದರಿಂದಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲವಾದರೂ, ಕಂಟೈನರ್ ಹಾಗೂ ಚರಂಡಿ ಹಾನಿಗೊಳಗಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net