

ಕಾರ್ಕಳ: ತಾಲೂಕಿನ ಬೈಲೂರಿನಲ್ಲಿ ಸೋಮವಾರ ರಾತ್ರಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಂಟೇನರ್ ಡಿಕ್ಕಿ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯರ್ಲಪ್ಪಾಡಿ ನಿವಾಸಿ ವಸಂತ ಆಚಾರ್ಯ (64) ಮೃತ ವ್ಯಕ್ತಿ. ಬೈಲೂರಿನ ಕೆಳ ಪೇಟೆಯಲ್ಲಿ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಉಡುಪಿಯಿಂದ ಕಾರ್ಕಳ ಕಡೆ ಸಾಗುತ್ತಿದ್ದ ಕಂಟೇನರ್ ಅವರಿಗೆ ಡಿಕ್ಕಿಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.