

ಯಾದಗಿರಿ : ಬೆಳೆ ವಿಮಾ ಪರಿಹಾರದ ಮಹತ್ವದ ಆದೇಶ ತೀರ್ಪು ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಶ್ರೀಮತಿ ಫರೀನ ಬೇಗಂ ಅವರು ಹೊರಡಿಸಿದ್ದಾರೆ.
ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಗ್ರಾಹಕರ ಪ್ರಕರಣ ಸಂ.11/2020ರ ತೀರ್ಪು ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬAಬಳಿ ಗ್ರಾಮದ ರೈತರಾದ ವಿರುಪಣ್ಣ ರೆಡ್ಡಿ ತಂದೆ ಸೂಗಣ್ಣ ರೆಡ್ಡಿ ಹಾಗೂ ಇನ್ನಿತರ 90 ರೈತರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಬೆಂಡೆಬAಬಳಿ ಶಾಖೆಯಿಂದ 2018-19ನೇ ಸಾಲಿಗೆ ಮುಂಗಾರು ಬೆಳೆ ಸಾಲವನ್ನು ಪಡೆದಿದ್ದು, ತತ್ಸಂಬAಧವಾಗಿ ಬ್ಯಾಂಕಿನವರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಒಳಗೊಂಡಿರುವ ಕೇಂದ್ರ ಸರ್ಕಾರದ ಕಡ್ಡಾಯ ಮಾರ್ಗಸೂಚಿ ಪ್ರಕಾರ ಬೆಳೆ ಸಾಲ ಪಡೆದ ಎಲ್ಲಾ ರೈತರ ಎಕರವಾರು ಜಮೀನಿನಲ್ಲಿ ಬೆಳೆದಂತಹ ಬೆಳೆಗೆ ಪಿ.ಎಂ.ಎಫ್.ಬಿ.ವೈ ಯೋಜನೆ ಅಡಿಯಲ್ಲಿ ವಿಮಾ ಕಂತನ್ನು ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಇವರಿಗೆ ರೈತರ ಪರವಾಗಿ ಸಂದಾಯ ಮಾಡಿರುತ್ತಾರೆ. ತದನಂತರದಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯು ನಾಶವಾಗಿ ಸದರಿ ನಾಶ ಹೊಂದಿದ ಬೆಳೆಯ ವಿಮಾ ಪರಿಹಾರ ಮೊತ್ತವನ್ನು ಭರಿಸಿಕೊಡುವಂತೆ ಸಂಬAಧಪಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕ್, ಮತ್ತು ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಯಾದಗಿರಿ ಜಿಲ್ಲಾಧಿಕಾರಿ ಮತ್ತು ಸರಕಾರದ ಸಂಬAಧಪಟ್ಟ ಇಲಾಖೆಗಳಲ್ಲಿ ಮೌಖಿಕವಾಗಿ ವಿಚಾರಿಸಿ ಮತ್ತು ಕಾನೂನುಡಿಯಲ್ಲಿ ನೋಟಿಸ್ ಕಳಿಸಲಾಗಿದ್ದರೂ ಕೂಡ ಯಾವ ಅಧಿಕಾರಿಗಳು ರೈತರಿಗೆ ಸಮಂಜಸವಾದ ಉತ್ತರ ಅಥವಾ ಪರಿಹಾರ ಕೊಟ್ಟಿರುವುದಿಲ್ಲ.
ಎಲ್ಲಾ 91 ರೈತರು ಒಂದೇ ದೂರಿನಡಿಯಲ್ಲಿ ಯಾದಗಿರಿ ಜಿಲ್ಲಾ ಆಯೋಗದ ಮುಂದೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ ಬೆಳೆ ನಾಳ ವಿಮೆ ಪರಿಹಾರ ಮೊತ್ತವನ್ನು ಭರಿಸಿಕೊಡುವಲ್ಲಿ ಸೇವಾ ನ್ಯೂನ್ಯತೆಯಾಗಿದೆಯೆಂದು ಜಿಲ್ಲಾ ಗ್ರಾಹಕರ ಆಯೋಗ ಯಾದಗಿರಿಯಲ್ಲಿ ಸಿಸಿ.ನಂ.11/2020ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಗ್ರಾಹಕರ ಆಯೋಗವು ಎಲ್ಲಾ ಪಕ್ಷಗಾರರ ವಾದ ಮತ್ತು ಸಾಕ್ಷö್ಯಪತ್ರಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ವಿಮಾ ಕಂಪನಿಯವರ ನಿಲುವು ಅಂದರೆ ವಿಮಾ ಕಂಪನಿಯ ಕೇಂದ್ರ ಸರಕಾರದ ಬೆಳೆ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ಸೂಚಿಸಿದ ಮಾರ್ಗಸೂಚಿಗಳ ಪ್ರಕಾರ ಗ್ರಾಮದ ರೈತರ ಬೆಳೆಯು ಕರ್ನಾಟಕ ಸರಕಾರ ಸೂಚಿಸಿದ ಪ್ರಕಾರ ಪ್ರದೇಶವಾರು ಬೆಳೆನಾಶದ ಬಗ್ಗೆ ನಿಗದಿಪಡಿಸಿದ ಕೋಷ್ಠಕದಲ್ಲಿ ನಿಗದಿಪಡಿಸಿದ ಇಳುವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದೂರುದಾರರು ಇಳುವರಿ ಪಡೆದಿರುವುದರಿಂದ ಸದರಿ ವಿಮಾದಾರರಿಗೆ ಯಾವುದೇ ವಿಮೆ ಪರಿಹಾರವನ್ನು ಕೊಡಲು ಬರುವುದಿಲ್ಲ. ಅನ್ನುವ ವಾದವನ್ನು ತಳ್ಳಿಹಕಿರುವ ಜಿಲ್ಲಾ ಆಯೋಗವು ಭಾರತದಲ್ಲಿ ಎಲ್ಲಾ ವಿಮಾ ಕಂಪನಿಗಳು ಭಾರತ ಸರ್ಕಾರದಿಂದ ರಚಿತವಾಗಿರುವ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಕಡ್ಡಾಯ ನಿಯಮಗಳನ್ನು ಸದರಿ ವಿಮಾ ಕಂಪನಿಯ ಪಾಲಿಸದೆ ಮತ್ತು
ಗ್ರಾಹಕರು ಪರಿಹಾರ ಕೋರಿ ಬಂದಾಗ ಹೇಳುವ ನೀತಿ, ನಿಯಮ ಕಟ್ಟಳೆಗಳನ್ನು ಮತ್ತು ಯಾವುದೇ ತರಹದ ಪೂರ್ವಭಾವಿ ನೀತಿ ನಿಯಮಗಳನ್ನು ಮತ್ತು ಸೂಚನೆಗಳನ್ನು ರೈತರಿಗೆ ತಿಳಿಯಪಡಿಸಿದೆ. ಯಾವೋಬ್ಬ ರೈತರಿಗೂ ಸದರಿ ಬೆಳೆ ವಿಮಾ ಪರಿಹಾರಕ್ಕೆ ಸಂಬAಧ ಪಟ್ಟಂತೆ ಪಾಲಿಸಿಯನ್ನು ನೀಡದೆ ಸಂಪೂರ್ಣವಾಗಿ ರೈತರನ್ನು ಬೆಳೆ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡದೆ ಎಲ್ಲಾ ಗ್ರಾಹಕರನ್ನು ಕತ್ತಲೆಯಲ್ಲಿ ಇಡುವ ಮೂಲಕ ವಿಮಾ ಸೇವೆಯ ಸೇವಾ ನ್ಯೂನತೆ, ಅನುಚಿತ ವಿಮಾ ವ್ಯಾಪಾರ ಪದ್ಧತಿ ಮತ್ತು ನಿಶ್ಕಾಳಜಿಯಿಂದ ಕೂಡಿದೆ ಎಂದು ಜಿಲ್ಲಾ ಆಯೋಗದ ಉಸ್ತುವಾರಿ ಅಧ್ಯಕ್ಷರಾದ ಶ್ರೀಮತಿ ಬೇಗಂ ಮತ್ತು ಸದಸ್ಯರಾದ ತ್ರಿಯಂಬಳೇಶ್ವರ ಇವರನ್ನೊಳಗೊಂಡ ಆಯೋಗವು, ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ಧ ಪ್ರಕರಣವನ್ನು ವಜಾಗೊಳಿಸುವ ಮೂಲಕ ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಕಂಪನಿಯು ಪ್ರತಿಯೊಬ್ಬ ದೂರುದಾರರಿಗೆ ಅವರ ವಿಮಾ ಕಂತಿನ ಪ್ರಕಾರ ಪಡೆದುಕೊಂಡ ವಿಮಾ ಮೊತ್ತಕ್ಕೆ ಆದೇಶದ ದಿನಾಂಕದಿAದ 45 ದಿನಗಳ ಒಳಗೆ ವಾರ್ಷಿಕ ಪ್ರತಿಶತ 6 ರಷ್ಟು ಬಡ್ಡಿಯಂತೆ, ಮಾನಸಿಕ ಹಿಂಸೆ ಮತ್ತು ಪ್ರಕರಣ ಖರ್ಚು ವೆಚ್ಚಗಳನ್ನು ಒಳಗೊಂಡAತೆ ಪ್ರತಿಯೊಬ್ಬ ದೂರುದಾರರಿಗೆ ಐದು ಸಾವಿರ ರೂಪಾಯಿಗಳನ್ನು ಪರಿಹಾರವನ್ನು ಕೊಡಲು ಬಾಧ್ಯಸ್ಥರೆಂದು ತೀರ್ಮಾನಿಸಿ 2024ರ ಸೆಪ್ಟೆಂಬರ್ 13 ರಂದು ಮಹತ್ವದ ಆದೇಶ ಹೊರಡಿಸಿದ್ದಾರೆ.