

ರಟ್ಟಿಹಳ್ಳಿ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮತ್ತು ಗಂಡು ಮಕ್ಕಳ ಶಾಲೆ ಆವರಣದ ಬದಿಯಲ್ಲಿರುವ ಗಟಾರದ ಮೇಲೆ ಕೊಠಡಿ ನಿರ್ವಿುಸಿದ ಹಿನ್ನೆಲೆಯಲ್ಲಿ ಮುಚ್ಚಿಹೋಗಿದ್ದ ಗಟಾರದಿಂದಾಗಿ ಅಲ್ಲಿನ ತ್ಯಾಜ್ಯ ಮೈದಾನದಲ್ಲಿ ಸಂಗ್ರಹವಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.
ಈ ಕುರಿತು ವಿಜಯವಾಣಿ ದಿನಪತ್ರಿಕೆ ಆ. 4ರಂದು ‘ಸರ್ಕಾರಿ ಶಾಲೆ ಆವರಣದಲ್ಲಿ ತ್ಯಾಜ್ಯ ಸಂಗ್ರಹ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಬಿಇಒ ಎನ್.ಶ್ರೀಧರ್ ಶಾಲೆಯ ಅವರಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯ ಶಿಕ್ಷಕಿ ಸರಸ್ವತಿ ಅಜ್ಜಪ್ಪನವರ ಹಾಗೂ ಕೆಆರ್ಐಡಿಎಲ್ ಇಂಜಿನಿಯರ್ರೊಂದಿಗೆ ರ್ಚಚಿಸಿದರು. ಬಳಿಕ ಮಾತನಾಡಿದ ಅವರು, ಶಾಲೆ ಬದಿಯ ಗಟಾರದ ಬಳಿ ತಾತ್ಕಾಲಿಕವಾಗಿ ಕಚ್ಚಾ ಕಾಲುವೆ ನಿರ್ವಿುಸಲಾಗುವುದು. ಗಟಾರದಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಲಾಗುವುದು.
ಶಾಲೆಯ ಕೊಠಡಿ ಕಾಮಗಾರಿ ಮುಗಿದ ಬಳಿಕ ಶಾಲೆ ಆವರಣದಲ್ಲಿ ಒಂದು ಪಕ್ಕಾ ಗಟಾರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಶುಕ್ರವಾರ ಸಂಜೆ ಸಂಬಂಧಿಸಿದ ಗುತ್ತಿಗೆದಾರರು ಜೆಸಿಬಿ ಮೂಲಕ ಕಚ್ಚಾ ಗಟಾರ ನಿರ್ವಿುಸಿ ಅದನ್ನು ಮುಖ್ಯ ಗಟಾರಕ್ಕೆ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.