

ಮೂಗೂರು: ಗ್ರಾಮದ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಅಧಿಕಾರಿಗಳ ವಸತಿ ಗೃಹದ ಕಾಮಗಾರಿಯು ತ್ವರಿತವಾಗಿ ಆರಂಭಿಸಲು ಅಧಿಕಾರಿಗಳ ತಂಡ ಮೂಗೂರಿಲ್ಲಿ ಸ್ಥಳ ಪರಿಶೀಲನೆ ನಡೆಸಿತು.
ಮೂಗೂರು ಹೋಬಳಿ ಕೇಂದ್ರದಲ್ಲಿ ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ವಸತಿಗೃಹದ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಲಾಗಿದ್ದು, ಸುಮಾರು 7.5 ಕೋಟಿ ರೂ. ಅಂದಾಜಿಸಲಾಗಿದೆ. ಸದ್ಯದಲ್ಲೇ ಕಟ್ಟಡದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಪಿಡಬ್ಲುೃಡಿ ಎಇಇ ಸತೀಶ್ ಚಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮುಖಂಡರಾದ ಎಂ.ಡಿ. ಬಸವರಾಜು, ಅರ್ಚಕ ಸುಂದರಪ್ಪ, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.