ಮೂರೇ ದಿನದಲ್ಲಿ ಕಾಲುಸಂಕ ನಿರ್ಮಾಣ

30kwr02 (2)
Published on

ಶೇಷಗಿರಿ ಮುಂಡಳ್ಳಿ ಕಾರವಾರ

ಭಾರಿ ಮಳೆಗೆ ಕೊಚ್ಚಿ ಹೋದ ಕಾಲುಸಂಕವೊಂದರ ದುರಸ್ತಿಗೆ ಸರ್ಕಾರದ ಅನುದಾನಕ್ಕಾಗಿ ಕಾಯದ ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಊರ ಯುವಕರೇ ಪರ್ಯಾಯ ಮರದ ಸೇತುವೆ ನಿರ್ವಿುಸಿಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ನಗರಬಸ್ತಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಗೇರಿ ಸಂರ್ಪಸುವ ಕಾಲು ಸಂಕದ ಮೇಲೆ ಬೃಹತ್ ಮರವೊಂದು ಬಿದ್ದು ಹಾನಿಯಾಗಿತ್ತು. ಮಾತ್ರವಲ್ಲ ಹೊಳೆಯ ನೀರಿನ ರಭಸಕ್ಕೆ ಸೇತುವೆ ಕೊಚ್ಚಿಹೋಗಿತ್ತು. ಇದರಿಂದಾಗಿ ಹೊರ ಜಗತ್ತಿನೊಂದಿಗೆ ಗ್ರಾಮದ ಸಂಪರ್ಕ ಕಡಿತಗೊಂಡಿತ್ತು.

ಸರ್ಕಾರಕ್ಕೆ ಮನವಿ ಸಲ್ಲಿಸಿ ಹೊಸ ಕಾಲುಸಂಕ ನಿರ್ವಿುಸಲು ಸಾಕಷ್ಟು ದಿನ ಬೇಕಾಗುತ್ತದೆ ಎಂಬುದನ್ನು ಅರಿತ ಊರಿನ ಯುವಕರು, ಮಳೆ ಕಡಿಮೆಯಾದಾಗ ತಾವೇ ಕಾಲು ಸಂಕ ನಿರ್ವಿುಸುವ ತೀರ್ವನಕ್ಕೆ ಬಂದರು. ಅದರಂತೆ ಹೊಳೆಯಲ್ಲಿನ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಕಾರ್ಯಪ್ರವೃತ್ತವಾದ ಊರಿನ ಯುವ ಪಡೆ ಮೂರು ದಿನಗಳ ಕಾಲ ಹಗಲು ರಾತ್ರಿಯೆನ್ನದೇ ಶ್ರಮ ವಹಿಸಿ ಮರದ ಕಾಲುಸಂಕವನ್ನು ನಿರ್ವಿುಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

45 ಮೀಟರ್ ಉದ್ದದ ಕಾಲುಸಂಕ: ಊರಿನ 40ಕ್ಕೂ ಅಧಿಕ ಜನರು ಸೇರಿಕೊಂಡು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಳ್ಳದಿಂದ 20 ಅಡಿ ಎತ್ತರದಲ್ಲಿ 45 ಮೀಟರ್ ಉದ್ದದ ಸೇತುವೆಯನ್ನು ಮೂರು ದಿನಗಳಲ್ಲಿ ನಿರ್ವಿುಸಿದ್ದಾರೆ. ಈ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಜತೆಗೆ ಸರ್ಕಾರಿ ವ್ಯವಸ್ಥೆಯ ನಿಧಾನಗತಿಯ ಕಾರ್ಯಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net