ಕಳಿಹಿತ್ಲುವಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ

Kalihitlu Concret Road
ಶಿರೂರು ಗ್ರಾಮದ ಕಳಿಹಿತ್ಲುವಿನಲ್ಲಿ ನಿರ್ವಾಣಗೊಂಡ ನೂತನ ಕಾಂಕ್ರೀಟ್ ರಸ್ತೆ.
Published on

ಬೈಂದೂರು: ಶಿರೂರು ಗ್ರಾಮದ ಕಳಿಹಿತ್ಲು ಜನರ ಬಹುದಿನದ ಬೇಡಿಕೆ ಈಡೇರಿದೆ. 1 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ವಾಣಗೊಂಡಿದ್ದು, ಈ ಭಾಗದ ಮೀನುಗಾರರಿಗೆ ಇನ್ನಷ್ಟು ಸಹಕಾರಿಯಾಗಲಿದೆ.

ಕಳಿಹಿತ್ಲು ಶಿರೂರು ಕರಾವಳಿ ಭಾಗದ ಪ್ರಮುಖ ಮೀನುಗಾರಿಕಾ ಕೇಂದ್ರವಾಗಿದೆ. ಆಗಸ್ಟ್ ಬಳಿಕ ಮೂರು ತಿಂಗಳು ಇಲ್ಲಿ ಸುವಾರು 200ಕ್ಕೂ ಹೆಚ್ಚು ನಾಡದೋಣಿಗಳು ನಿರಂತರವಾಗಿ ಮೀನುಗಾರಿಕೆ ನಡೆಸುತ್ತವೆ. ಉಪ್ಪುಂದ, ಮರವಂತೆ, ದೊಂಬೆ ಮುಂತಾದ ಕಡೆಯಿಂದ ಮೀನುಗಾರಿಕಾ ದೋಣಿಗಳು ಕಳಿಹಿತ್ಲು ಮೂಲಕ ಮೀನುಗಾರಿಕೆ ನಡೆಸುತ್ತವೆ. ಕಳೆದ ಹಲವು ವರ್ಷಗಳಿಂದ ಇಲ್ಲಿನ ಮೀನುಗಾರಿಕಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು.

ಉಡುಪಿ ಜಿಲ್ಲೆಯ ಎಆರ್‌ಡಿಎಲ್ ವಿಶೇಷ ಅನುದಾನದಲ್ಲಿ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ವಾಣವಾಗಿದೆ. ಇದರಿಂದಾಗಿ ಈ ವರ್ಷ ಮೀನುಗಾರಿಕೆಗೆ ಸಾಕಷ್ಟು ಅನುಕೂಲವಾಗುವ ಜತೆಗೆ ಪ್ರವಾಸೊದ್ಯಮ ಕೇಂದ್ರವಾಗಿ ಬೆಳೆಯುತ್ತಿರುವ ಕಳಿಹಿತ್ಲು ಬಂದರು ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net