ವಿನೂತನ ಚಿಂತನೆಗಳಿಂದ ಗ್ರಾಮೀಣ ಶಾಲೆಗಳ ಅಭ್ಯುದಯ : ಶಾಸಕಿ ಭಾಗೀರಥಿ ಮುರುಳ್ಯ ಅನಿಸಿಕೆ

New Project (4)
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ, ಪಾಲಕರು, ಶಿಕ್ಷಕರ ವೃಂದದವರ ವಿನೂತನ ಚಿಂತನೆಗಳಿಂದ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳು ಅಭ್ಯುದಯವಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಮುರುಳ್ಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡಕೆ ತೋಟವನ್ನು ಗಿಡ ನಾಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುರುಳ್ಯ ಗ್ರಾಪಂ ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಕರುಣಾಕರ ಗೌಡ ಹುದೇರಿ, ಶಾಲೆಯನ್ನು ದತ್ತು ಸ್ವೀಕರಿಸಿದ ಮಧು ಪಿ.ಆರ್., ಯತೀಶ್ ಪಾಲೋಳಿ, ಹಿರಿಯರಾದ ವಾರಿಜಾ ದಾಮೋದರ್, ಎಸ್‌ಡಿಎಂಸಿ ಅಧ್ಯಕ್ಷ ಅವಿನಾಶ್ ದೇವರಮಜಲು, ಉಪಾಧ್ಯಕ್ಷೆ ಸವಿತಾ ಕರಿಂಬಿಲ, ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಪೂದೆ, ಗಂಗಾಧರ ಪೊಳೆಂಜ, ಮಕ್ಕಳ ಮನೆ ಸಮಿತಿ ಗೌರವಾಧ್ಯಕ್ಷ ಸುದೇಶ್ ರೈ, ದಾನಿಗಳಾದ ಶಿವಪ್ಪ ಗೌಡ ಕುದ್ಪಾಜೆ, ಚಂದ್ರಶೇಖರ ಎಂ.ಎಲ್., ನಿವೃತ್ತ ಮುಖ್ಯಗುರು ಬಾಲಕೃಷ್ಣ ಕೆ., ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ಆಲಾಜೆ, ನಿವೃತ್ತ ಉಪತಹಸೀಲ್ದಾರ್ ಜನಾರ್ದನ ಅಲೆಕ್ಕಾಡಿ, ಯುವಶಕ್ತಿ ಅಧ್ಯಕ್ಷ ರಮಾನಂದ ರೈ ಪೊಳೆಂಜ, ಪ್ರಮುಖರಾದ ಅಶೋಕ್‌ಕುಮಾರ್ ರೈ, ಸುಂದರ ಗೌಡ, ನಂದಕುಮಾರ್, ಹೇಮಾವತಿ ಹುದೇರಿ ಅಡಕೆ ಗಿಡಗಳನ್ನು ನೆಟ್ಟರು.

ಮುಖ್ಯ ಶಿಕ್ಷಕಿ ಶಶಿಕಲಾ ಬಾಲಕೃಷ್ಣ ಸ್ವಾಗತಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಮಧು ಯತೀಶ್ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಹೊಸ ಹೊಸ ಯೋಜನೆಗಳ ಮೂಲಕ ಶಾಲೆಯ ಪ್ರಗತಿಗೆ ಸರ್ವರೂ ಕೈಜೋಡಿಸಿ ಸಹಕಾರ ನೀಡುವುದು ಅಗತ್ಯ. ಶಾಲೆಯಲ್ಲಿ ಕೃಷಿ ತೋಟ ನಿರ್ಮಾಣ ಮಾಡುವುದರಿಂದ ಶಾಲೆಯ ಆದಾಯ ಹೆಚ್ಚುತ್ತದೆ. ನಾಟಿ ಮಾಡಿದ ಗಿಡಗಳನ್ನು ಚೆನ್ನಾಗಿ ಪೋಷಣೆ ಮಾಡಿ ಅದರಿಂದ ಶಾಲೆಗೆ ಲಾಭ ತರುವಂಥ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಭಾಗೀರಥಿ ಮುರುಳ್ಯ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net