

ಚನ್ನಗಿರಿ: ಮತದಾರರು ಬಯಸಿ ಆಶೀರ್ವದಿಸಿದರೆ ಮಾತ್ರ ತುಮ್ೋಸ್ ಸಂಸ್ಥೆಯ ಚುನಾವಣಾ ಕಣಕ್ಕಿಳಿಯುವುದಾಗಿ ತುಮ್ೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದರು.
ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ತುಮ್ೋಸ್ ಚುನಾವಣೆ ಸಂಬಂಧ, ತಾಲೂಕಿನ ಚನ್ನಾಮ್ಮಾಜಿ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿ, ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದ್ದರೆ ಅದಕ್ಕೆ ನಾನಷ್ಟೇ ಕಾರಣನಲ್ಲ, ನನ್ನ ಜತೆಗೂಡಿ ಎಲ್ಲರೂ ಶ್ರಮವಹಿಸಿದ್ದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಪಡೆಯುವಂತೆ ಆಗಿದೆ ಎಂದರು.
ಕಳೆದ ಚುನಾವಣೆಯಲ್ಲಿ ಯಾವ ತಪ್ಪೆಸಗದಿದ್ದರೂ ಇಲ್ಲದ ಆರೋಪ ಮಾಡುವ ಮೂಲಕ ಅಧಿಕಾರ ಹಿಡಿದವರು ಅಡಕೆ ಬೆಳೆಗಾರರಿಗಾಗಿ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಆಡಳಿತಾರೂಢರು ಪ್ರಶ್ನಿಸಿಕೊಳ್ಳಲಿ. 25 ವರ್ಷದಿಂದ ಸಹಕಾರ ಕ್ಷೇತ್ರಕ್ಕೆ ಬಂದು ನಿಸ್ವಾರ್ಥದಿಂದ ದುಡಿದಿದ್ದರಿಂದ ಸಂಸ್ಥೆ ಎಲ್ಲರ ಕಣ್ಣಮುಂದಿದೆ. ಬೇರೆಡೆಗೆ ನಮ್ಮ ಶ್ರಮ ತೊಡಗಿಸಿದ್ದರೆ ಇದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಇರುತ್ತಿದ್ದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡಿ ಕಳುಹಿಸಿದಲ್ಲಿ, ದಾವಣಗೆರೆ, ಶಿವಮೊಗ್ಗದಲ್ಲೂ ಕಾಣದಂತಹ ಹೈಟೆಕ್ ಆಸ್ಪತ್ರೆ ಹಾಗೂ ವಸತಿ ಶಾಲೆಯನ್ನು ಸಂಸ್ಥೆಯ ವತಿಯಿಂದ ತಾಲೂಕಿನಲ್ಲಿ ತೆರೆಯಲಾಗುವುದು. ಇದರ ಮೂಲಕ ಮತದಾರರ ಋಣವನ್ನು ತೀರಿಸುತ್ತೇನೆ ಎಂದು ಭರವಸೆ ನೀಡಿದರು.
ಸಣ್ಣ ಉಳಿತಾಯ 224 ಕೋಟಿ ರೂ., 98 ಕೋಟಿ ರೂ. ಠೇವಣಿ, 54 ಕೋಟಿ ನಿಧಿಗಳು, 12 ಕೋಟಿ ರೂ. ಷೇರು ಬಂಡವಾಳ, ಅವರ್ತನಿಧಿ 12 ಕೋಟಿ ರೂ. ಇದೆ. ಸಂಸ್ಥೆಯಿಂದ ಪೆಟ್ರೋಲ್ ಬಂಕ್ ತೆರೆಯಲಾಯಿತು. ತಾಲೂಕಿನಲ್ಲಿ ಉಳಿದೆಡೆ 10 ಬಂಕ್ ಮಾಡಿದ್ದರೆ ಸಂಸ್ಥೆ ಹೆಚ್ಚಿನ ಲಾಭದಲ್ಲಿರುತ್ತಿತ್ತು ಎಂದರು.
ಅಧ್ಯಕ್ಷನಾಗಿದ್ದಾಗ ಸೂಪರ್ ಮಾರ್ಕೆಟ್ ಮಾಡಲು ತೀರ್ವನಿಸಿ ಒಂದೇ ಸೂರಿನಡಿ ಗ್ರಾಹಕರಿಗೆ ಎಲ್ಲ ವಸ್ತು ಕೈಗೆಟಕುವಂತೆ ಮಾಡುವ ಉದ್ದೇಶವಿತ್ತು. ಅದಕ್ಕೆ ವಿರೋಧಿಗಳು ಅಡ್ಡಿಪಡಿಸಿದರು. ಇದರಿಂದ ತಾಲೂಕಿನ ರೈತರಿಗೆ ಅನ್ಯಾಯವಾಯಿತು ಎಂದು ಹೇಳಿದರು.
ಕಾಗ್ಮ ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ ಸಂಸ್ಥೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೆ ರೈತರ ಸಂಕಷ್ಟಗಳಿಗೆ ಪರಿಹಾರ ಇಲ್ಲದಿರುವ ಕಾರಣ ರೈತರ ಕಲ್ಯಾಣಕ್ಕಾಗಿ ಮಹಾಮಂಡಲ ರಚನೆಯಾಗಬೇಕು. ಈ ಸಮಿತಿಯಲ್ಲಿ ಸಂಸದರು, ಶಾಸಕರು ಸಹಕಾರಿ ಕ್ಷೇತ್ರದ ದುರೀಣರು ಇರುತ್ತಾರೆ. ಅವರ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ನಾಯಕರಾದವರಿಗೆ ದೂರದೃಷ್ಟಿ ಇರಬೇಕು. ರೈತರ ಏಳಿಗೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಂದು ಸಂಸ್ಥೆ 10 ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿದೆ. ರೈತರಿಗೆ 340 ಕೋಟಿ ರೂ.ಗಳ ಸಾಲ ನೀಡಲಾಗಿದೆ ಎಂದರು.
ತುಮ್ೋಸ್ ನಿರ್ದೇಶಕರಾದ ಟಿ.ವಿ. ರಾಜು, ಪಾಂಡೋಮಟ್ಟಿ ಲೋಕೇಶ್ವರಪ್ಪ, ಬೈರನಹಳ್ಳಿ ಚನ್ನಬಸಪ್ಪ, ಪಾಂಡೋಮಟ್ಟಿ ಜಗದೀಶ್, ಪ್ರಕಾಶ್ ಹಲಕನಾಳ್, ಜಿ.ಆರ್. ಶಿವಕುಮಾರ್, ಬನ್ನಿಹಳ್ಳಿ ರಾಜಣ್ಣ, ಕಂಚಿಗನಾಳು ತಿಪ್ಪಣ್ಣ ಇದ್ದರು.