

ಹೆಬ್ರಿ: ಪರ್ಕಳದಿಂದ ಹಿರಿಯಡಕ ಮೂಲಕ ಹೆಬ್ರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಅಗಲೀಕರಣ ಕಾಮಗಾರಿಯಿಂದ ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಆವರಣಗೋಡೆ ಹಾಗೂ ಕಟ್ಟಡಕ್ಕೆ ತಡೆಗೋಡೆ ನಿರ್ಮಿಸಿಕೊಡುವ ಮೂಲಕ ಎದುರಾಗಿದ್ದ ಹಾನಿ ಭೀತಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿವಾರಿಸಿದೆ.
ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾದಾಗ ಹಿರಿಯಡಕ-ಹೆಬ್ರಿ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂಭಾಗ ಎಂಟು ಅಡಿಗಳಷ್ಟು ನೆಲ ಅಗೆದು ರಸ್ತೆ ಅಗಲೀಕರಣಗೊಳಿಸಲಾಗಿತ್ತು. ಶಾಲೆಯ ತನಕವೂ ರಸ್ತೆ ಅಗೆದಿದ್ದರಿಂದ ಕಟ್ಟಡ ಕುಸಿದು ಹಾನಿಯಾಗುವ ಅಪಾಯ ಎದುರಾಗಿತ್ತು.