

ಇಟಗಿ: ಸ್ವಾತಂತ್ರ$್ಯ ಹೋರಾಟದ ತ್ಯಾಗ, ಬಲಿದಾನ ಅರಿತು, ಸಂವಿಧಾನದಲ್ಲಿರುವ ಮೌಲ್ಯ ರೂಢಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯ ರುದ್ರಪ್ಪ ತುರಮರಿ ಹೇಳಿದರು. ಇಲ್ಲಿನ ಗ್ರಾಪಂ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರೊ$್ಯತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ನಂತರ ಹಮ್ಮಿಕೊಂಡಿದ್ದ ಪ್ರತಿಭಾ ಹಾಗೂ ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪತ್ರಿಕಾ ವಿತರಕ ಗೋವರ್ಧನ ಕೊಲ್ಲಾಪುರ ಸೇರಿ ಅನೇಕರಿಗೆ ಸಮಾಜ ಸೇವಾ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಪಿಡಿಒ ವೀರೇಶ ಸಜ್ಜನ, ಗ್ರಾಪಂ ಸದಸ್ಯರಾದ ಇಕ್ಬಾಲ್ ನದ್ಾ, ಬಸವರಾಜ ತುರಮರಿ, ಅಶೋಕ ಬೆಣಚಿನಮರಡಿ, ರಾಯಣ್ಣ ಬಳಗಪ್ಪನವರ, ದೇಮಪ್ಪ ಗಂಗನಾಯಕ, ಸಂತೋಷ ಕಿಳೋಜಿ, ಶೋಭಾ ಶೀಲಿ, ಸುಮಲತಾ ಬಡ್ಡಿ, ಮನ್ಸೂರಾ ಕಿತ್ತೂರ, ಪಾರ್ವತಿ ಕುರಬರ, ಮಂಜುನಾಥ ಕುಲ್ಲೊಳ್ಳಿ, ಸಿಬ್ಬಂದಿ ಇದ್ದರು.