

ಬೈಂದೂರು: ಕೇಂದ್ರ ಯುವಕಾರ್ಯ ಯುವ ಕ್ರೀಡಾ ಸಚಿವಾಲಯ, ಉಡುಪಿ ನೆಹರು ಯುವ ಕೇಂದ್ರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಕೊಲ್ಲೂರು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕಾಲೇಜಿನ ಸಭಾಭವನದಲ್ಲಿ ಸಂವಿಧಾನ ದಿನ ಆಚರಿಸಲಾಯಿತು.
ಮಹಿಳಾ ಮಂಡಲ ಅಧ್ಯಕ್ಷೆ ಲತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ನಾಗೇಶ್ ದಳಿ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕಿ ಸಂಗೀತಾ ಶೆಟ್ಟಿ ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದರು. ಉಪನ್ಯಾಸಕ ನಾಗರಾಜ್ ಅಡಿಗ ವಿದ್ಯಾರ್ಥಿಗಳಿಗೆ ಪೀಠಿಕೆ ಬೋಧಿಸಿದರು. ಗ್ರಾಪಂ ಮಾಜಿ ಅಧ್ಯಕ್ಷೆ ವನಿತಾ ಶೇರುಗಾರ್, ಪ್ರಾಂಶುಪಾಲ ಗೋಪಾಕೃಷ್ಣ ಜಿ.ಬಿ, ಮಹಿಳಾ ಮಂಡಲದ ಸದಸ್ಯೆಯರು ಇದ್ದರು. ಪ್ರಸನ್ನಾ ಶರ್ಮಾ ವಂದಿಸಿದರು. ರಾಮ ನಾಯಕ್ ಕೆ. ಬಿ. ನಿರೂಪಿಸಿದರು.