ಸಂವಿಧಾನದ ಆಶಯಗಳನ್ನು ಭದ್ರಗೊಳಿಸಿ

1kudligi2
ಕೂಡ್ಲಿಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ತಾಪಂ ಇಒ ವೈ.ರವಿಕುಮಾರ್ ಚಾಲನೆ ನೀಡಿದರು. ಸಿಡಿಪಿಒ ನಾಗನಗೌಡ ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿಯರಾದ ವಿಜಯಲಕ್ಷ್ಮೀ, ಅನುಪಮ, ರುಬಿಯಾ ಬೇಗಂ ಭಾಗಿಯಾಗಿದ್ದರು.
Published on

ಕೂಡ್ಲಿಗಿ; ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಾದರೆ ಮತದಾನ ಅವಶ್ಯ ಎಂದು ತಾಪಂ ಇಒ ವೈ.ರವಿಕುಮಾರ್ ಹೇಳಿದರು.

ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

18 ವರ್ಷಗಳು ತುಂಬಿದ ಯುವಕ, ಯುವತಿಯರು ಮತದಾನ ಮಾಡಲು ಅರ್ಹರಾಗಿದ್ದು, ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಬಿಎಲ್‌ಒ ಮೂಲಕ ನೋಂದಾಣಿ ಮಾಡಿಸಿ ಚುನಾವಣೆಯಲ್ಲಿ ಅರ್ಹ ವ್ಯಕ್ತಿಗಳನ್ನು ಚುನಾಯಿಸಿ ಸಂವಿಧಾನದ ಆಶಯವನ್ನು ಭದ್ರಗೊಳಿಸಬೇಕು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೆರೆಹೊರೆಯವರನ್ನು ಹಾಗೂ ಕಾಲನಿಗಳಲ್ಲಿನ ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು. ಕಳೆದ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪಟ್ಟಣದ 12 ಹಾಗೂ ಗ್ರಾಮೀಣ ಪ್ರದೇಶದ 74 ಮತಗಟ್ಟೆಗಳು ಸೇರಿ ಒಟ್ಟು 86 ಮತಗಟ್ಟೆಗಳಲ್ಲಿ ಶೇ 60ಕ್ಕಿಂತ ಕಡಿಮೆ ಮತದಾನವಾಗಿದೆ.

ಅದ್ದರಿಂದ ಈ ಬಾರಿ ಎಲ್ಲ ಮತಗಟ್ಟೆಗಳಲ್ಲಿಯೂ ಶೇ95ಕ್ಕಿಂತ ಹೆಚ್ಚು ಮತದಾನವಾಗುವಂತೆ ಮಾಡಬೇಕಾಗಿದೆ. ಅದಕ್ಕಾಗಿ ಪ್ರತಿ ಮತದಾರರು ಮತ ಚಲಾವಣೆ ಮಾಡುವಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಸಿಡಿಪಿಒ ನಾಗನಗೌಡ ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿಯರಾದ ವಿಜಯಲಕ್ಷ್ಮೀ, ಅನುಪಮ, ರುಬಿಯಾ ಬೇಗಂ, ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು, ತಿಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ತಾಪಂ ಹಾಗೂ ಪಪಂ ಸಿಬ್ಬಂದಿ ಜಾಥಾದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net