ಸಂವಿಧಾನ ವಿರೋಧಿ ಡಿಕೆಶಿ

25blh1 bjp protest
Published on

ಬೈಲಹೊಂಗಲ: ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ ಬಿಜೆಪಿ ಕಾರ್ಯಕರ್ತರು ಡಿಸಿಎಂ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ, ಮಂಡಲ ಅಧ್ಯ ಸುಭಾಷ ತುರಮರಿ ಮಾತನಾಡಿ, ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಕಾಂಗ್ರೆಸ್​ ಸಂವಿಧಾನ ವಿರೋಧಿಯಾಗಿದೆ ಎಂದರು.

ಮುಖಂಡರಾದ ಗುರುಪಾದ ಕಳ್ಳಿ, ಸುನೀಲ ಮರಕುಂಬಿ, ರೈತ ಮೋರ್ಚಾ ಜಿಲ್ಲಾಧ್ಯ ಜಗದೀಶ ಬೂದಿಹಾಳ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್​ ಕಡಿ, ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ಯುವ ಮೋರ್ಚಾ ಅಧ್ಯ ಪ್ರಶಾಂತ ಅಮ್ಮಿನಭಾವಿ, ಅಜ್ಜಪ್ಪ ಹೊಸೂರ, ಗೌಡಪ್ಪ ಹೊಸಮನಿ, ನಾಗಪ್ಪ ಸಂಗೊಳ್ಳಿ, ಉಮೇಶ ಬೋಳಣ್ಣವರ, ಸದಾಶಿವಗೌಡ ಪಾಟೀಲ, ಆತ್ಮಾನಂದ ಅಬ್ಬಾಯಿ, ಪುಂಡಲೀಕ ಭಜಂತ್ರಿ, ಶ್ರೀಶೈಲ ಕಟ್ಟಿಮನಿ, ರವಿ ತುರಮರಿ, ಕಿರಣ ಶೀಲವಂತರ, ಪ್ರವಿಣ ಶಿಂಗಾರಿ, ಸಿ.ಜಿ.ವಿಭೂತಿಮಠ, ರಾಜು ಗುಡಿಮನಿ, ಪರಶುರಾಮ ರಾಯಬಾಗ, ಮಡಿವಾಳ ಬಡ್ಲಿ, ವೀರೇಶ ಬೂಶಣ್ಣವರ, ಸಂಗಪ್ಪ ಮುನವಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net